ಇಂಡೋನೇಷ್ಯಾಗೆ ಹೋಗುವುದು ಸುರಕ್ಷಿತವೇ?-ವ್ಯಕ್ತಿಯ ಪ್ರಶ್ನೆ, ಜ್ವಾಲಾಮುಖಿಯನ್ನೇ ಕೇಳಿನೋಡುತ್ತೇನೆ-ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ

ಟ್ವಿಟರ್ ನಲ್ಲಿ ತಮ್ಮನ್ನು ಕೇಳುವ ಪ್ರಶ್ನೆಗಳಿಗೆ ನೀಡುವ ಖಡಕ್ ಉತ್ತರಗಳಿಗೆ ಖ್ಯಾತಿ ಪಡೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇಂಡೋನೇಷ್ಯಾದ ಬಾಲಿಗೆ ಪ್ರವಾಸಕ್ಕೆ ತೆರಳಬೇಕೆಂದುಕೊಂಡಿದ್ದ ವ್ಯಕ್ತಿಯೊಬ್ಬರು, ಇಂಡೋನೇಷ್ಯಾದ ಬಾಲಿಗೆ ತೆರಳುವುದು ಸುರಕ್ಷಿತವೇ ಎಂದು ಸುಷ್ಮಾ ಸ್ವರಾಜ್ ಅವರನ್ನು ಪ್ರಶ್ನಿಸಿದ್ದಾರೆ.  ಇದಕ್ಕೆ ಉತ್ತರಿಸಿರುವ ಸುಷ್ಮಾ ಸ್ವರಾಜ್ ಅಲ್ಲಿರುವ ಜ್ವಾಲಾಮುಖಿಯನ್ನೇ ಕೇಳಿ ನೋಡುತೇನೆ ಎಂದು ಉತ್ತರಿಸಿದ್ದಾರೆ. 
ಸುಷ್ಮಾ ಸ್ವರಾಜ್ ಅವರ ಈ ಉತ್ತರವನ್ನು ಟ್ವಿಟರ್ ನಲ್ಲಿ 11 ಸಾವಿರ ಮಂದಿ ಲೈಕ್ ಮಾಡಿದ್ದು, 2 ಸಾವಿರ ಬಾರಿ ರಿಟ್ವಿಟ್ ಮಾಡಿದ್ದಾರೆ. ಸಚಿವರ ಬಳಿ ಇಂತಹ ಅಸಂಬದ್ಧ ಪ್ರಶ್ನೆಯನ್ನು ಕೇಳಿದ ವ್ಯಕ್ತಿಯನ್ನೂ ಟ್ವಿಟಿಗರು ಸರಿಯಾಗೇ ತರಾಟೆಗೆ ತೆಗೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com