ಅಸ್ಸಾಂ: ರೈಲ್ವೆ ಖಾತೆ ರಾಜ್ಯ ಸಚಿವ ರಾಜೇನ್ ಗೋಹೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ರೈಲ್ವೆ ಇಲಾಖೆ ರಾಜ್ಯ ಸಚಿವ ರಾಜೇನ್ ಗೋಹೈನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಅಸ್ಸಾಂ ನ ಓರ್ವ ಮಹಿಳೆ ಸಚಿವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ.
ರಾಜೇನ್ ಗೋಹೈನ್
ರಾಜೇನ್ ಗೋಹೈನ್
ಗೌಹಾಟಿ: ರೈಲ್ವೆ ಇಲಾಖೆ ರಾಜ್ಯ ಸಚಿವ ರಾಜೇನ್ ಗೋಹೈನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಅಸ್ಸಾಂ ನ ಓರ್ವ ಮಹಿಳೆ ಸಚಿವರ ವಿರುದ್ಧ  ಅತ್ಯಾಚಾರ ಆರೋಪ ಮಾಡಿದ್ದಾರೆ.
ಕೇಂದ್ರ ಅಸ್ಸಾಂನ ನಾಗಾನ್ ಜಿಲ್ಲೆಯ ಮಹಿಳೆ ಸಚಿವರಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ಆರೋಪಿಸಿ ನಾಗಾನ್ ಸಾದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಆಗಸ್ಟ್ 2ರಂದು ಪ್ರಕರಣ ದಾಖಲಿಸಲಾಗಿದೆ ಎಂದು ನಾಗಾನ್ ಪೊಲೀಸ್ ಅಧೀಕ್ಷಕ ಶಂಕರ್ ರಾಯ್ ಮೇಧಿ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. ಐಪಿಸಿ ಸೆಕ್ಷನ್ 417, 376 ಮತ್ತು 506 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
ನಾಲ್ಕು ಬಾರಿ ನಾಗಾನ್ ಸಂಸದರಾಗಿರುವ ಗೋಹೈನ್ ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಲು ಲಭ್ಯವಿಲ್ಲ. ಆದರೆ ಸಂಸದರು ಮಹಿಳೆಯ ಪತಿಯನ್ನು ನಿಂದಿಸುತ್ತಿರುವ ಆಡಿಯೋ ಟೇಪ್ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com