'ಖಾದ್ಯ ಪ್ರೇಮಿ ವಾಜಪೇಯಿ ಭೋಜನ ಶೈಲಿ ನೋಡಿ ಅಚ್ಚರಿಗೊಂಡಿದ್ದ ವಿಯೆಟ್ನಾಂ ಪ್ರಧಾನಿ'

ತಗ್ಗು ಕೆ ಲಡ್ಡು' ಬಹುಶಃ ಕಾನ್ಪುರದ ಮಂದಿ ಈ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ, ಕಾರಣ ಈ ಹೆಸರಿನ ಲಡ್ಡುಗೆ ಖ್ಯಾತಿ ತಂದಿತ್ತವರೇ ಅಜಾತ ಶತ್ರು ವಾಜಪೇಯಿ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಕಾನ್ಪುರ: 'ತಗ್ಗು ಕೆ ಲಡ್ಡು' ಬಹುಶಃ ಕಾನ್ಪುರದ ಮಂದಿ ಈ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ, ಕಾರಣ ಈ ಹೆಸರಿನ ಲಡ್ಡುಗೆ ಖ್ಯಾತಿ ತಂದಿತ್ತವರೇ ಅಜಾತ ಶತ್ರು ವಾಜಪೇಯಿ..
ಹೌದು.. ಕಾನ್ಪುರದ ಖ್ಯಾತ ಸಿಹಿತಿಂಡಿಗಳ ಅಂಗಡಿಗಳ ಪೈಕಿ ಈ ತಗ್ಗು ಕೆ ಲಡ್ಡು ಅಂಗಡಿ ಕೂಡ ಒಂದು. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರಕ್ಕೆ ಬಂದಾಗಲೆಲ್ಲಾ ತಪ್ಪದೇ ಈ ಸಿಹಿತಿನಿಸುಗಳ ಅಂಗಡಿಗೆ ಬಂದು ಲಡ್ಡು ಸವಿಯುತ್ತಿದ್ದರಂತೆ. ಒಂದು ವೇಳೆ ತಾವು ಖುದ್ಧು ಬರಲು ಸಾಧ್ಯವಾಗದಿದ್ದರೆ ತಮ್ಮ ಸ್ನೇಹಿತರು ಮತ್ತು ಇತರೆ ಸಹಾಯಕರಿಂದ ಲಡ್ಡು ತರಿಸಿಕೊಂಡು ಸವಿಯುತ್ತಿದರಂತೆ. 
ಈ ಬಗ್ಗೆ ಮಾತನಾಡಿರುವ ಎಎನ್ಐ ಸುದ್ದಿಸಂಸ್ಥೆ ಸಂಸ್ಥಾಪಕರಾದ ಪ್ರೇಮ್ ಪ್ರಕಾಶ್ ಅವರು, ವಾಜಪೇಯಿ ಅವರು ಯಾವಾಗಲೇ ಕಾನ್ಪುರಕ್ಕೆ ಭೇಟಿ ನೀಡಿದರೂ ಈ ತಗ್ಗುಕೆ ಲಡ್ಡು ಅಂಗಡಿಗೆ ಬಂದು ಲಡ್ಡು ಸವಿಯುತ್ತಿದ್ದರು. ಖಾದ್ಯ ಪ್ರೇಮಿಯಾಗಿದ್ದ ಅವರು ಎಲ್ಲ ಬಗೆಯ ತಿನಿಸುಗಳನ್ನು ಸವಿಯುತ್ತಿದ್ದರು. ಅದರಲ್ಲೂ ಅವರಿಗೆ ಈ ಲಡ್ಡು ಹೆಚ್ಚು ಇಷ್ಟವಾಗಿತ್ತು ಎಂದು ವಾಜಪೇಯಿ ಅವರೊಂದಿಗಿನ ತಮ್ಮ ದಿನಗಳನ್ನು ಮೆಲುಕು ಹಾಕಿದ್ದಾರೆ.
ಇದೇ ರೀತಿ 2001ರಲ್ಲಿ ನಡೆದಿದ್ದ ಘಟನೆಯೊಂದನ್ನು ನೆನಪಿಸಿಕೊಂಡ ಅವರು, ವಾಜಪೇಯಿ ಅವರು ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾಗ ಅವರೊಂದಿಗೆ ಕೆಲ ಬಾಣಸಿಗರೂ ಕೂಡ ಹೋಗಿದ್ದರು. ವಿಯೆಟ್ನಾಂ ಆಹಾರ ಪದ್ಧತಿ ಅವರಿಗೆ ಹಿಡಿಸುತ್ತಿರಲಿಲ್ಲ. ಹೀಗಾಗಿ ಅವರಿಗೆ ಭಾರತೀಯ ಶೈಲಿಯ ಖಾದ್ಯಗಳನ್ನು ಉಣಬಡಿಸಲು ಬಾಣಸಿಗರು ಕೂಡ ತೆರಳುತ್ತಿದ್ದರು.
ಹೀಗೆ ಒಂದು ವಿಯೆಟ್ನಾಂ ಪ್ರಧಾನಿ ಹಾಗೂ ವಾಜಪೇಯಿ ಅವರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಭೋಜನ ಸವಿಯುತ್ತಿದ್ದ ವಾಜಪೇಯಿ ಅವರು ಬಾಹ್ಯ ಲೋಕದ ಅರಿವೇ ಇಲ್ಲದೇ ತಮ್ಮ ಭೋಜನವನ್ನು ಆಸ್ವಾದಿಸುತ್ತಿದ್ದರು. ಅಚ್ಚರಿ ಎಂದರೆ ಅಂದಿನ ವಿಯೆಟ್ನಾಂ ಪ್ರಧಾನಿ ತಮ್ಮ ಭೋಜನ ಪೂರ್ಣಗೊಳಿಸಿ ವಾಜಪೇಯಿ ಅವರು ಭೋಜನ ಪೂರ್ಣಗೊಳಿಸಲು ಕಾದು ನಿಂತಿದ್ದರು. ಆದರೆ ಇದಾವುದರ ಅರಿವೇ ಇಲ್ಲದೆ ವಾಜಪೇಯಿ ತಮ್ಮ ಭೋಜನವನ್ನು ಆಸ್ವಾದಿಸುತ್ತಾ ತಿನ್ನುತ್ತಿದ್ದರು. ತಮ್ಮ ತಟ್ಟೆಯಲ್ಲಿದ್ದ ಎಲ್ಲ ಪದಾರ್ಥಗಳ ರುಚಿಯನ್ನೂ ವಾಜಪೇಯಿ ಸವಿಯುತ್ತಿದ್ದರು. ವಾಜಪೇಯಿ ಅವರ ಈ ನಡೆ ವಿಯೆಟ್ನಾಂ ಪ್ರಧಾನಿ ಅವರಿಗೂ ಅಚ್ಚರಿ ಮೂಡಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com