ಇಬ್ಬರು ಅಪ್ರಾಪ್ತೆಯರ ಮೇಲೆ 11 ಮಂದಿಯಿಂದ ಅತ್ಯಾಚಾರ: ಮೊಬೈಲ್ ಕಸಿದು ಪರಾರಿ

ಜಾರ್ಖಂಡ್​ನ ಲೋಹರ್​​ದಾಗಾದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ 11 ಜನ ಅತ್ಯಾಚಾರ ಎಸಗಿದ ದಾರುಣ ಕೃತ್ಯ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲೋಹರ್​ದಾಗಾ: ಜಾರ್ಖಂಡ್​ನ ಲೋಹರ್​​ದಾಗಾದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ 11 ಜನ ಅತ್ಯಾಚಾರ ಎಸಗಿದ ದಾರುಣ ಕೃತ್ಯ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು 11 ಮಂದಿಯನ್ನ ಬಂಧಿಸಿದ್ದಾರೆ.
ಆಗಸ್ಟ್​ 16ರಂದು ಹಿರಿಹರ್​ ಟೋಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 18 ರಿಂದ 28 ವರ್ಷದ ಒಳಗಿನ 11 ಆರೋಪಿಗಳಿಂದ ಈ ಕೃತ್ಯ ನಡೆದಿದೆ. ಬೈಕ್​ನಲ್ಲಿ ಬಂದ ಈ ಗುಂಪು ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದೆ. 
ಆ ವೇಳೆ ಬಾಲಕಿ, ತನ್ನ ಗೆಳತಿಗೆ ಫೋನ್​ಮಾಡಿ ಸಹಾಯ ಕೋರಿದ್ದಾಳೆ. ಈ ವೇಳೆ ಎಲ್ಲ 11 ಜನ ಇಬ್ಬರು ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ.    
ರಕ್ಷಣೆಗೆ ಬಂದ ನೆರೆಹೊರೆಯವರ ಹಲ್ಲೆ ಮಾಡಿ, ಬಾಲಕಿಯರನ್ನ ದೂರ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಸಾದರ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿಯರಿಂದ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com