ಉತ್ತರಪ್ರದೇಶ ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ ಜೊತೆ ಸನ್ನಿ ಲಿಯೋನ್!

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ ಜೊತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಚಿತ್ರ ಕಾಣಿಸಿಕೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ ಜೊತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಚಿತ್ರ ಕಾಣಿಸಿಕೊಂಡಿದೆ. 
ಜಿಲ್ಲಾ ಚುನಾವಣಾ ಕಾರ್ಯಾಲಯ ಪ್ರಕಟಿಸಿರುವ ಮತದಾರರ ಪರಿಷ್ಕೃತ ಪಟ್ಟಿಯಲ್ಲಿ ಸನ್ನಿ ಲಿಯೋನ್, ಆನೆ, ಪಾರಿವಾಳ ಮತ್ತು ಜಿಂಕೆಯಂತಹ ಕಾಡು ಪ್ರಾಣಿಗಳೂ ಸ್ಥಾನ ಗಿಟ್ಟಿಸಿಕೊಂಡಿವೆ. 
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಈ ಎಡವಟ್ಟಾಗಿದ್ದು ವಿಷಯ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆ ಪಟ್ಟಿಯನ್ನು ಹಿಂಪಡೆಯಲಾಗಿದೆ. ಬಲ್ಲಿಯಾದ ವಿವೇಕಾನಂದ ಕಾಲೋನಿಯ ದುರ್ಗಾವತಿ ಸಿಂಗ್ ಅವರ ಹೆಸರಿನ ಜೊತೆಗೆ ಸನ್ನಿ ಲಿಯೋನ್ ಅವರ ಚಿತ್ರವನ್ನು ಜೋಡಿಸಲಾಗಿದೆ. 
ಇನ್ನು ಕುನ್ವಾರ್ ಅಂಕುರ್ ಸಿಂಗ್ ಎನ್ನುವವರ ಚಿತ್ರದ ಬದಲು ಜಿಂಕೆಯ ಚಿತ್ರ ಪ್ರಕಟವಾಗಿದೆ. ರಾಜ್ಯದ ಮಾಜಿ ಸಚಿವ ನಾರದ್ ರೈ ಅವರ ಭಾವಚಿತ್ರ ಇರಬೇಕಾದ ಜಾಗದಲ್ಲಿ ಆಫ್ರಿಕಾ ಆನೆಯ ಚಿತ್ರ ಕಾಣಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com