ಐಎಎಸ್ ಹುದ್ದೆ ತ್ಯಜಿಸಿದ್ದ ರಾಯಪುರ ಮಾಜಿ ಜಿಲ್ಲಾಧಿಕಾರಿ ಬಿಜೆಪಿ ಸೇರ್ಪಡೆ

ಇತ್ತೀಚಿಗಷ್ಟೇ ಐಎಎಸ್ ಗೆ ಗುಡ್ ಬೈ ಹೇಳಿ, ಜಿಲ್ಲಾಧಿಕಾರಿ ಹುದ್ದೆ ತ್ಯಜಿಸಿದ್ದ ಚತ್ತೀಸ್ ಗಢದ ರಾಯಪುರ ಮಾಜಿ ಜಿಲ್ಲಾಧಿಕಾರಿ...
ಬಿಜೆಪಿ ಅಧ್ಯಕ್ಷರೊಂದಿಗೆ  ಓ ಪಿ ಚೌಧರಿ
ಬಿಜೆಪಿ ಅಧ್ಯಕ್ಷರೊಂದಿಗೆ ಓ ಪಿ ಚೌಧರಿ
Updated on: 
ನವದೆಹಲಿ: ಇತ್ತೀಚಿಗಷ್ಟೇ ಐಎಎಸ್ ಗೆ ಗುಡ್ ಬೈ ಹೇಳಿ, ಜಿಲ್ಲಾಧಿಕಾರಿ ಹುದ್ದೆ ತ್ಯಜಿಸಿದ್ದ ಚತ್ತೀಸ್ ಗಢದ ರಾಯಪುರ ಮಾಜಿ ಜಿಲ್ಲಾಧಿಕಾರಿ ಓ ಪಿ ಚೌಧರಿ ಅವರು ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. 
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಚತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರೊಂದಿಗಿನ ತಮ್ಮ ಫೋಟೋವನ್ನು ಟ್ವೀಟ್ ಮಾಡಿರುವ ಚೌಧರಿ ಅವರು, ನಾನು ಬಿಜೆಪಿಯ ಸದಸ್ಯತ್ವ ಪಡೆದಿದ್ದೇನೆ ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿಯಾಗಿ ನನ್ನ 13 ವರ್ಷಗಳ ಸೇವೆ ತೃಪ್ತಿ ತಂದಿದೆ ಮತ್ತು ಜನತೆಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದೇನೆ. ಆದರೆ ಐಎಎಸ್ ಅಧಿಕಾರಿಗೆ ಕೆಲವು ಮಿತಿಗಳಿವೆ. ನಾನು ಜನತೆಗಾಗಿ ಹೆಚ್ಚು ಸೇವೆ ಮಾಡಬೇಕಿದೆ. ಹೀಗಾಗಿ ಐಎಎಸ್ ಗೆ ವಿದಾಯ ಹೇಳುತ್ತಿದ್ದೇನೆ ಎಂದು ಚೌಧರಿ ಅವರು ಪಿಟಿಐಗೆ ತಿಳಿಸಿದ್ದಾರೆ.
2005ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ 37 ವರ್ಷದ ಓ ಪಿ ಚೌಧರಿ ಅವರು ಕಳೆದ ವಾರ ರಾಜಿನಾಮೆ ನೀಡಿದ್ದು, ಅದನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಈಗ ಬಿಜೆಪಿ ಸೇರಿರುವ ಚೌಧರಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com