ಮುಂಬೈ: ಮತದಾರರ ಪಟ್ಟಿಯಲ್ಲಿ ಸಾಯಿಬಾಬಾ ಹೆಸರು ಸೇರಿಸಲು ಯತ್ನಿಸಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಅಹ್ಮದ್ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಆಯೋಗದ ಆನ್ ಲೈನ್ ವ್ಯವಸ್ಥೆ ಮೂಲಕ ಸಾಯಿ ಬಾಬಾ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಯತ್ನಿಸಲಾಗಿದೆ. ಆನ್ ಲೈನ್ ಅರ್ಜಿಗಳ ಪರಿಶೀಲನೆ ವೇಳೆ ಅಧಿಕಾರಿಗಳು ಇದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆನ್ ಲೈನ್ ಅರ್ಜಿಯಲ್ಲಿ ಸಾಯಿ ಬಾಬಾ ಹೆಸರಿಗೆ ಶಿರಡಿ ದೇವಾಲಯವನ್ನು ವಿಳಾಸವನ್ನಾಗಿ ನೀಡಲಾಗಿತ್ತು. ತಹಶೀಲ್ದಾರ್ ಅವರ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.