ಬಿಜೆಪಿಗೆ ತಳುಕುಹಾಕಿ ಎನ್ ಆರ್ ಸಿಯನ್ನು ನೋಡಬಾರದು, ಎನ್ ಆರ್ ಸಿ ದೇಶದ ಅಕ್ರಮ ವಲಸೆಯ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವಾಗಿ, ಯಾರು ಬೇಕಾದರೂ ಇಲ್ಲಿ ಬಂದು ನೆಲೆಯೂರುವುದಕ್ಕೆ ಹೇಗೆ ಸಾಧ್ಯ? ಒಂದು ದೇಶ ಈ ರೀತಿ ನಡೆಯುವುದಕ್ಕೆ ಸಾಧ್ಯವಿಲ್ಲ. ಆ ದೇಶದ ಪ್ರಜೆಗಳಿಗೆ ಆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ. ಯಾರು ಬೇಕಾದರೂ ಬಂದು ನೆಲೆಯೂರುವುದಕ್ಕೆ ಭಾರತವೇನು ಧರ್ಮಛತ್ರ ಅಲ್ಲ ಎಂದು ಅಮಿತ್ ಶಾ ತೀಕ್ಷ್ಣವಾಗಿ ಅಕ್ರಮ ವಲಸಿಗರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.