ಚಂದ್ರಬಾಬು ನಾಯ್ಡು ನೇತೃತ್ವದ ಬಿಜೆಪಿಯೇತರರ ಸಭೆಗೆ ಮಮತಾ ಗೈರು?

ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಸಭೆಯನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖಂಡ ಎನ್.ಚಂದ್ರಬಾಬು ನಾಯ್ಡು ಸೋಮವಾರ ನಡೆಸಲಿದ್ದು.....
ಎನ್.ಚಂದ್ರಬಾಬು ನಾಯ್ಡು
ಎನ್.ಚಂದ್ರಬಾಬು ನಾಯ್ಡು
Updated on: 
ವಿಜಯವಾಡ: ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಸಭೆಯನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖಂಡ ಎನ್.ಚಂದ್ರಬಾಬು ನಾಯ್ಡು ಸೋಮವಾರ ನಡೆಸಲಿದ್ದು ಸಭೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಇನ್ನೂ ಕಾದು ನೋಡಬೇಕಿದೆ. ಈ ನಡುವೆ ದೆಹಲಿಯಲ್ಲಿ ನಡೆಯುವ ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ,  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ತೆಲಂಗಾಣದಲ್ಲಿ ನಡೆದ ಚುನಾವಣೆಯಲ್ಲಿ ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿಯವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ತಮ್ಮ ಪಕ್ಷದ ಬೆಂಬಲ ನೀಡಿದ್ದ ನಾಯ್ಡು ಇದೀಗ ಬಿಜೆಪಿಯೇತರ ಪಕ್ಷಗಳ ನಾಯಕರ ಸಭೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಪಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗಲೇ ಈ ಸಭೆ ನಡೆಯುತ್ತಿದ್ದು ಕಳೆದ ಕೆಲ ದಿನಗಳಿಂದಲೂ ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಹಲವಾರು ಮುಖಂಡರೊಡನೆ ನಾಯ್ಡು ಸಂಪರ್ಕ ಮಾಡಿ ತಮಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು.
ಇಷ್ಟಾಗಿಯೂ ಪಕ್ಷದ ಪ್ರಮುಖರು ಸಭೆಯಲ್ಲಿ ಮಮತಾ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
"ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿಸುವ ಎಲ್ಲಾ ಪಕ್ಷಗಳ ಒಗ್ಗೂಡಿಸುವಿಕೆಗೆ ಇದೊಂದು ಪ್ರಯತ್ನ ಎಂದೇ ಬಿಂಬಿತವಾಗಿರುವ ನಾವು ಖಚಿತವಾಗಿ ಹಾಜರಾಗುತ್ತೇವೆ" ಎನ್ನುವ ಪಕ್ಷದ ಪ್ರಮುಖರು ಐದೇ ವೇಳೆ ಮಮತಾ ಸಭೆಗೆ ಹಾಜರಾಗದೆ ಹೋದರೆ ಅದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದೂ ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಸಭೆಗೆ ಕಾಂಗ್ರೆಸ್ ಮತ್ತು ಹಲವಾರು  ಬಿಜೆಪಿಯೇತರ ಪಕ್ಷಗಳನ್ನು ಆಹ್ವಾನಿಸಿದ ನಾಯ್ಡು ಅವರೆಲ್ಲರ ಒಪ್ಪಿಗೆ ಪಡೆದಿದ್ದರು.ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ  ಹೆಸರು ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿತ್ತು.
ಪತ್ರಿಕೆಯೊಡನೆ ಮಾತನಾಡಿದ ಆಂಧ್ರ ಟಿಡಿಪಿ ಅಧ್ಯಕ್ಷ ಮತ್ತು ಇಂಧನ ಸಚಿವ ಕೆ.ಕಲಾ ವೆಂಕಟ ರಾವ್, ಸೋಮವಾರದ ಸಭೆಗೆ ಯಾವುದೇ ರ್ದಿಷ್ಟ ಅಜೆಂಡಾ ಇಲ್ಲ ಎಂದು ಹೇಳಿದರು."ಪ್ರಜಾಪ್ರಭುತ್ವ ಉಳಿಸಿ,  ಬಿಜೆಪಿಯ ಹಿಡಿತದಿಂದ ರಾಷ್ಟ್ರವನ್ನು ರಕ್ಷಿಸಿ ಎನ್ನುವುದು ಬಿಜೆಪಿ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸುವ ಹಾಗೂ ಮುಂದಿನ ಭವಿಷ್ಯದ ಕ್ರಮವನ್ನು ಚಾಲ್ತಿಗೆ ತರುವಲ್ಲಿನ ಏಕೈಕ ಘೋಷಣೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಮತಾ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತಿತರರು ನಾಳಿನ ಸಭೆಯಲ್ಲಿ ಹಾಜರಾಗಲಿದ್ದಾರೆ ಎಂದು ಸಚಿವರು ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com