ದೇಶ

ವಿವಾಹವಾಗಿ 21 ವರ್ಷದ ನಂತರ ವಿಚ್ಛೇದನ ಕೋರಿದ ರಾಜಸ್ಥಾನ ರಾಜವಂಶಸ್ಥೆ ದಿಯಾ ಕುಮಾರಿ!

ರಾಜಸ್ಥಾನದ ರಾಜವಂಶಸ್ಥೆ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ ತಮ್ಮ 21 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು. ತಮ್ಮ ಪತಿ ನರೇಂದ್ರ ...

ವಿವಾಹವಾಗಿ 21 ವರ್ಷದ ನಂತರ ವಿಚ್ಛೇದನ ಕೋರಿದ ರಾಜಸ್ಥಾನ ರಾಜವಂಶಸ್ಥೆ ದಿಯಾ ಕುಮಾರಿ!
ದಿಯಾ ಕುಮಾರಿ
Published On :
ನವದೆಹಲಿ: ರಾಜಸ್ಥಾನದ ರಾಜವಂಶಸ್ಥೆ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ  ತಮ್ಮ 21 ವರ್ಷಗಳ  ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು. ತಮ್ಮ ಪತಿ ನರೇಂದ್ರ ಸಿಂಗ್‌ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. 
ಹಿಂದೂ ವಿವಾಹ ಕಾಯಿದೆಯ ಪರಿಚ್ಛೇದ 13ಬಿ ಅಡಿ ದಿಲ್ಲಿಯ ಗಾಂಧಿನಗರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 
ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.  ವಿಚ್ಛೇಧನಕ್ಕೆ ಕಾರಣ ತೀರಾ ವಯಕ್ತಿಕವಾದದ್ದು ಎಂದು ಎಂಬರು ತಿಳಿಸಿದ್ದಾರೆ.
ಸಾಧಾರಣ ಕುಟುಂಬಕ್ಕೆ ಸೇರಿದ ನರೇಂದ್ರ ಸಿಂಗ್‌, 9 ವರ್ಷಗಳ ಪ್ರೀತಿಯ ನಂತರ 1997ರ ಆಗಸ್ಟ್‌ನಲ್ಲಿ ದಿಯಾ ಅವರನ್ನು ಮದುವೆಯಾಗಿದ್ದರು. ಒಂದೇ ಗೋತ್ರದ ಈ ಇಬ್ಬರು ಮದುವೆಯಾಗಿದ್ದು, ರಾಜವಂಶಸ್ಥರು ಮತ್ತು ರಜಪುತ ಸಮುದಾಯದ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.  ಒಬ್ಬ ಪುತ್ರನನ್ನು ದತ್ತು ತೆಗೆದುಕೊಳ್ಳಲಾಗಿದೆ.
2013ರಲ್ಲಿ ರಾಜಕೀಯ ಪ್ರವೇಶಿಸಿದ ದಿಯಾ ಅವರು, ಸವಾಯಿ ಮಾಧೋಪುರ ಕ್ಷೇತ್ರದ ಶಾಸಕಿಯಾಗಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ಕಳೆದ ವಾರ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ದೂರ ಉಳಿದಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.