ಸುರ್ಜಿತ್ ಭಲ್ಲಾ ರಾಜೀನಾಮೆ ಅಂಗೀಕರಿಸಿದ ಪ್ರಧಾನ ಮಂತ್ರಿಗಳ ಕಚೇರಿ

ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಹಾಗೂ ಖ್ಯಾತ ಅಂಕಣಕಾರ ಸುರ್ಜಿತ್ ಭಲ್ಲಾ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಪ್ರಧಾನಮಂತ್ರಿಗಳ ಕಾರ್ಯಾಲಯ ಮಂಗಳವಾರ ಅಂಗೀಕರಿಸಿದೆ...
ಸುರ್ಜಿತ್ ಭಲ್ಲಾ
ಸುರ್ಜಿತ್ ಭಲ್ಲಾ
ನವದೆಹಲಿ: ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಹಾಗೂ ಖ್ಯಾತ ಅಂಕಣಕಾರ ಸುರ್ಜಿತ್ ಭಲ್ಲಾ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಪ್ರಧಾನಮಂತ್ರಿಗಳ ಕಾರ್ಯಾಲಯ ಮಂಗಳವಾರ ಅಂಗೀಕರಿಸಿದೆ. 
ಸುರ್ಜಿತ್ ಭಲ್ಲ ಅವರು ಬೇಕೆಂದು ಸಂಸ್ಥೆಗೆ ಸೇರ್ಪಡೆಗೊಳ್ಳುವ ಹಿನ್ನಲೆಯಲ್ಲಿ ತಮ್ಮ ಸ್ಥಾನಕ್ಕೆ ಡಿ.1ರಂದು ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. 
ಆರ್'ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸುರ್ಜಿತ್ ಅವರು ರಾಜೀನಾಮೆ ಸಲ್ಲಿಸಿರುವ ಸುದ್ದಿ ಕುರಿತು ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಈ ಹಿನ್ನಲೆಯಲ್ಲಿ ತಮ್ಮ ರಾಜೀನಾಮೆ ಕುರಿತು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದ ಸುರ್ಜಿತ್ ಭಲ್ಲಾ ಅವರು, ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಡಿಸೆಂಬರ್ 1 ರಂದು ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದರು. 
ನೀತಿ ಆಯೋಗದ ಸದಸ್ಯ ಬಿಬೇಕ್ ದೆಬ್ರಾಯ್ ಅವರ ನೇತೃತ್ವದ ಆರ್ಥಿಕ ಸಲಹಾ ಮಂಡಳಿಯಲ್ಲಿ ಪ್ರಸ್ತುತ ಆರ್ಥಿಕ ತಜ್ಞರಾದ ರಥಿನ್ ರಾಯ್, ಅಶಿಮಾ ಗೋಯಲ್ ಹಾಗೂ ಶಮಿಕಾ ರವಿ ಸದಸ್ಯರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com