ವಿಜಯ್ ಮಲ್ಯ ಕಳೆದುಕೊಂಡ ಕೋಟಿ ಕೋಟಿ ಬೆಲೆಯ ವಸ್ತುಗಳು ಯಾವುವು?

9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶ ಬಿಟ್ಟು ಲಂಡನ್ ನಲ್ಲಿ ನೆಲೆಸಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಲು ಯುಕೆಯ ವೆಸ್ಟ್ ಮಿನ್ ಸ್ಟಾರ್...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on: 
ಲಂಡನ್: 9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ದೇಶ ಬಿಟ್ಟು ಲಂಡನ್ ನಲ್ಲಿ ನೆಲೆಸಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಲು ಯುಕೆಯ ವೆಸ್ಟ್ ಮಿನ್ ಸ್ಟಾರ್ ನ್ಯಾಯಾಲಯ ಒಪ್ಪಿಗೆ ನೀಡಿದ್ದು ಇದು ಮಲ್ಯಗೆ ಸಂಕಷ್ಟ ಹೆಚ್ಚಿಸಿದೆ. 
ಸಾಲ ವಸೂಲಾತಿಗೆ ವಿಜಯ್ ಮಲ್ಯ ಆಸ್ತಿ ಮುಟ್ಟುಗೋಲಿಗೆ ಭಾರತೀಯ ಬ್ಯಾಂಕ್ ಗಳು ತುದಿಗಾಲಿನಲ್ಲಿ ನಿಂತಿದೆ. ಇನ್ನು ಮದ್ಯದ ದೊರೆ ವಿಜಯ್ ಸದ್ಯ ತನ್ನ ಕೋಟ್ಯಂತರ ರುಪಾಯಿ ಮೌಲ್ಯದ ಆಭರಣವನ್ನಾಗಲಿ ಅಥವಾ ಫೆರಾರಿ, ಪೊರ್ಷ್, ಮೇಬ್ಯಾಚ್ ಮುಂತಾದ ಐಷಾರಾಮಿ ವಾಹನದಲ್ಲಿ ಸುತ್ತಾಡುತ್ತಿಲ್ಲ. 
ವಿಜಯ್ ಮಲ್ಯರ ಪ್ರತಿಯೊಂದು ಸ್ವತ್ತು ಸಹ ಸದ್ಯ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಲಂಡನ್ ಕೋರ್ಟ್ ನ ದಂಡಾಧಿಕಾರಿಗೆ ವಿಜಯ್ ಮಲ್ಯ ಅವರ ವಾಚ್, ಆಭರಣ ಹಾಗೂ ಕಾರುಗಳನ್ನು ಹಸ್ತಾಂತರಿಸಿದ್ದಾರೆ. 
ವಿಜಯ್ ಮಲ್ಯ 10 ಲಕ್ಷ ರುಪಾಯಿ ಮೌಲ್ಯದ ಎರಡು ಚಿನ್ನದ ನೆಕ್ಲೇಸ್ ಗಳನ್ನು, ವಜ್ರದ ಕಿವಿಯೋಲೆಗಳು, ವಜ್ರದ ಬ್ರೇ ಸ್ಲೆಟ್ ಅಥವಾ ಅವರ 70 ಲಕ್ಷ ರುಪಾಯಿ ಮೌಲ್ಯದ ವಾಚ್ ಸೇರಿ 9 ಐಷಾರಾಮಿ ವಾಚುಗಳನ್ನು ಧರಿಸುತ್ತಿದ್ದರು. ಆದರೆ ಯುಕೆ ಕೋರ್ಟ್ ಗೆ 9 ವಾಹನಗಳು, 3 ಯಾಚ್ ಗಳು(ವಿಹಾರ ನೌಕೆ), 7 ಆಭರಣ, 9 ವಾಚುಗಳು, ಎರಡು ರತ್ನದ ಕಲ್ಲುಗಳು, 12 ಖಡ್ಗ, 2 ಗುರಾಣಿಗಳನ್ನು ಒಳಗೊಂಡ ರಕ್ಷಾಕವಚದ ಪುರಾತನ ಸೂಟ್ ಅನ್ನು ಮಲ್ಯ ಹಸ್ತಾಂತರ ಮಾಡಿದ್ದಾರೆ. 
ಭಾರತದಲ್ಲಿನ ಕೆಲ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 95 ಲಕ್ಷ ಮೌಲ್ಯದ ರೋಲ್ಸ್ ರಾಯ್ಸ್, ಫ್ಯಾಂಟಮ್, ಜಾನ್ ಕೂಪರ್, ರೇಂಜ್ ರೋವರ್, ಬೆಂಟ್ಲೇ ಟರ್ಬೋ ಆರ್, 4,3 ಕೋಟಿ ರೂ. ಮೌಲ್ಯದ ಒಂದು ಫೆರಾರಿ ಕಾರು ಸೇರಿ ಮೂರು ಫೆರಾರಿ ಕಾರುಗಳನ್ನು ಸದ್ಯ ಮದ್ಯದ ದೊರೆ ಕಳೆದುಕೊಂಡಿದ್ದಾರೆ. ಒಟ್ಟಾರೆ 16 ಕೋಟಿ ರುಪಾಯಿ ಮೌಲ್ಯದ ವಾಹನಗಳನ್ನು ಕಳೆದುಕೊಂಡಿದ್ದಾರೆ. 
ಇದೇ ವೇಳೆ 30 ಕೋಟಿ ರುಪಾಯಿ ಮೌಲ್ಯದ ಝಿಪ್ಪೋ, ಕಿಂಗ್ ಸ್ಟಾರ್, ಸೆಟಾ ಎಲಾ, ಹೀಗೆ 3 ವಿಹಾರ ನೌಕೆಗಳನ್ನು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com