ಸಂಸತ್ ನಲ್ಲಿ ಈ ಮಸೂದೆ ಅಂಗೀಕಾರವಾದರೆ, ಕೆಲಸದ ಅವಧಿ ನಂತರ ಬಾಸ್, ಕಚೇರಿಯಿಂದ ಕರೆ, ಇ-ಮೇಲ್ ಬರಲ್ಲ!

ಎಷ್ಟೋ ಬಾರಿ ಕೆಲಸದ ನಂತರವೂ ಕಚೇರಿಯಿಂದ ಇ-ಮೇಲ್ ಅಥವಾ ಕರೆ ಬರುವ ಉದಾಹರಣೆಗಳಿವೆ. ಆದರೆ ಸಂಸತ್ ನಲ್ಲಿ ಇದೊಂದು ಮಸೂದೆ ಮಂಡನೆಯಾಗಿ ಅಂಗೀಕಾರಗೊಂಡರೆ, ಅವೆಲ್ಲದರಿಂದ ಶೀಘ್ರವೇ ಮುಕ್ತಿ ಸಿಗಲಿದೆ.
ಸಂಸತ್ ನಲ್ಲಿ ಈ ಮಸೂದೆ ಅಂಗೀಕಾರವಾದರೆ, ಕೆಲಸದ ಅವಧಿ ನಂತರ ಬಾಸ್, ಕಚೇರಿಯಿಂದ ಕರೆ, ಇ-ಮೇಲ್ ಬರಲ್ಲ!
ಸಂಸತ್ ನಲ್ಲಿ ಈ ಮಸೂದೆ ಅಂಗೀಕಾರವಾದರೆ, ಕೆಲಸದ ಅವಧಿ ನಂತರ ಬಾಸ್, ಕಚೇರಿಯಿಂದ ಕರೆ, ಇ-ಮೇಲ್ ಬರಲ್ಲ!
Updated on
ನವದೆಹಲಿ: ಎಷ್ಟೋ ಬಾರಿ ಕೆಲಸದ ನಂತರವೂ ಕಚೇರಿಯಿಂದ  ಇ-ಮೇಲ್ ಅಥವಾ ಕರೆ ಬರುವ ಉದಾಹರಣೆಗಳಿವೆ. ಆದರೆ ಸಂಸತ್ ನಲ್ಲಿ ಇದೊಂದು ಮಸೂದೆ ಮಂಡನೆಯಾಗಿ ಅಂಗೀಕಾರಗೊಂಡರೆ, ಅವೆಲ್ಲದರಿಂದ ಶೀಘ್ರವೇ ಮುಕ್ತಿ ಸಿಗಲಿದೆ. 
ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಖಾಸಗಿ ಮಸೂದೆಯೊಂದು ನೌಕರರ ಕಲ್ಯಾಣ ಪ್ರಾಧಿಕಾರ ರಚನೆಗೆ ಆಗ್ರಹಿಸಿದೆ. ಈ ಮಸೂದೆ ಅಂಶಗಳು ಜಾರಿಗೊಂಡರೆ, ಕರ್ತವ್ಯದ ಅವಧಿಯ ನಂತರ ಅಥವಾ ರಜೆ ದಿನಗಳಲ್ಲಿ ಕಚೇರಿಯಿಂದ ಇ-ಮೇಲ್ ಹಾಗೂ ಕರೆಗಳನ್ನು 
ಯಾವುದೇ ನೌಕರ ಮುಲಾಜಿಲ್ಲದೇ ತಿರಸ್ಕರಿಸಲು ಸಾಧ್ಯವಿದೆ. 
ಭಾರತದ ಸಂಸತ್ ಇತಿಹಾಸದಲ್ಲಿ ಈ ವರೆಗೆ ಕೇವಲ 5 ಖಾಸಗಿ ಮಸೂದೆಗಳು ಅಂಗೀಕಾರಗೊಂಡಿದ್ದು ಈ ಮಸೂದೆ ಖಾಸಗಿ ಮಸೂದೆಯಾಗಿರುವ ಹಿನ್ನೆಲೆಯಲ್ಲಿ ಅಂಗೀಕಾರವಾಗುವ ಸಾಧ್ಯತೆಗಳು ತೀರಾ ಕಡಿಮೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com