ರಫೆಲ್ ಒಪ್ಪಂದ ಒಂದು ಹಗರಣ: ವಿವರ ಬಹಿರಂಗಪಡಿಸದ ಮೋದಿ ಸರ್ಕಾರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

ರಾಫೆಲ್ ಜೆಟ್ ಖರೀದಿ ಒಪ್ಪಂದವನ್ನು ಹಗರಣ ಎಂದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಒಪ್ಪಂದದ ಬಗ್ಗೆ ವಿವರಣೆ ನೀಡದೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ನವದೆಹಲಿ: ರಾಫೆಲ್ ಜೆಟ್ ಖರೀದಿ ಒಪ್ಪಂದವನ್ನು ಹಗರಣ ಎಂದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಒಪ್ಪಂದದ ಬಗ್ಗೆ ವಿವರಣೆ ನೀಡದೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. 
36 ರಾಫೆಲ್ ಜೆಟ್ ಖರೀದಿಯ ಮಾಹಿತಿ ಗೌಪ್ಯ ಮಾಹಿತಿಯಾದ್ದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಸಂಸತ್ ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. 
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಒಪ್ಪಂದವನ್ನು ಬದಲಾವಣೆ ಮಾಡಲು ಹಾಗೂ ಓರ್ವ ಉದ್ಯಮಿಗೆ ಲಾಭ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಪ್ಯಾರಿಸ್ ಗೆ ತೆರಳಿದ್ದರು, ರಾಫೆಲ್ ಜೆಟ್ ಖರೀದಿ ಒಪ್ಪಂದ ಒಂದು ಹಗರಣ, ಪ್ರಧಾನಿ ಜೆಟ್ ಖರೀದಿ ಒಪ್ಪಂದದ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದ್ದಾರೆ. 
ರಾಫೆಲ್ ಜೆಟ್ ಖರೀದಿಗೆ ಎಷ್ಟು ಮೊತ್ತ ಪಾವತಿ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ಹೇಳುತ್ತಾರೆ, ಇದರ ಅರ್ಥ ಏನು? ರಕ್ಷಣಾ ಸಚಿವರ ಹೇಳಿಕೆಯಲ್ಲಿಯೇ ಇದೊಂದು ಹಗರಣ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com