ದೇಶ

ಕೇಂದ್ರ ಬಜೆಟ್ ಬಗ್ಗೆ ಜನರಿಗೆ ತಿಳಿಸಲು ಸಂಸದರಿಗೆ 'ಲಂಚ್ ಪೇ ಚರ್ಚಾ' ಟಾಸ್ಕ್!

2018-19 ನೇ ಸಾಲಿನ ಬಜೆಟ್ ನ ಧನಾತ್ಮಕ ಅಂಶಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಲಂಚ್ ಪೇ ಚರ್ಚಾ ಟಾಸ್ಕ್ ನೀಡಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಜನರಿಗೆ ತಿಳಿಸಲು ಸಂಸದರಿಗೆ 'ಲಂಚ್ ಪೇ ಚರ್ಚಾ' ಟಾಸ್ಕ್!
ಪ್ರಧಾನಿ ನರೇಂದ್ರ ಮೋದಿ
Published On :
ನವದೆಹಲಿ: 2018-19 ನೇ ಸಾಲಿನ ಬಜೆಟ್ ನ ಧನಾತ್ಮಕ ಅಂಶಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಲಂಚ್ ಪೇ ಚರ್ಚಾ ಟಾಸ್ಕ್ ನೀಡಿದ್ದಾರೆ. 
ಬಜೆಟ್ ನ ಧನಾತ್ಮಕ ಅಂಶಗಳನ್ನು ಸಂಸದರು ಲಂಚ್ ಪೇ ಚರ್ಚಾದಲ್ಲಿ ಪಟ್ಟಿ ಮಾಡತಕ್ಕದ್ದು ಹಾಗೂ ಅದನ್ನು ಹೆಚ್ಚು ಜನರಿಗೆ ಪ್ರಚಾರ ಮಾಡುವುದು ಈ ಟಾಸ್ಕ್ ನ ಉದ್ದೇಶವಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಂಚ್ ಪೇ ಚರ್ಚಾದ ಘೋಷಣೆ ಮಾಡಿದ್ದಾರೆ. 
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ರೈತರು, ಮಧ್ಯಮ ವರ್ಗದವರಿಗೆ ಹೆಚ್ಚು ಉಪಯುಕ್ತವಾದದ್ದು ಹಾಗೂ ಈ ಅಂಶಗಳು ಹೆಚ್ಚು ಜನರಿಗೆ ತಲುಪುವಂತೆ ಮಾಡುವುದರ ಬಗ್ಗೆ ಲಂಚ್ ಪೇ ಚರ್ಚಾದಲ್ಲಿ ಸಂಸದರು ಚರ್ಚೆ ನಡೆಸಬೇಕೆಂದು ಪ್ರಧಾನಿ ಹೇಳಿದ್ದಾರೆ. ಸಂಸದರು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಲಂಚ್ ಪೇ ಚರ್ಚಾ ನಡೆಸಬೇಕೆಂದು ಪ್ರಧಾನಿ ಸೂಚನೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.