ಚೆನ್ನೈನಲ್ಲಿ ಸರಗಳ್ಳರ ಹಾವಳಿ: ಸಿಸಿಟಿವಿಯಲ್ಲಿ ಭಯಾನಕ ಕೃತ್ಯ ಸೆರೆ

ಚೆನ್ನೈ ಮಹಾನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ಓಡಾಡುವ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದು, ಕ್ಷಣಾರ್ಧದಲ್ಲಿ ಸರ ಎಗರಿಸಿ ಪರಾರಿಯಾಗುತ್ತಿದ್ದಾರೆ.
ಚೆನ್ನೈನಲ್ಲಿನ ಸರಗಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಚಿತ್ರ
ಚೆನ್ನೈನಲ್ಲಿನ ಸರಗಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಚಿತ್ರ
Updated on: 

ಚೆನ್ನೈ: ಚೆನ್ನೈ ಮಹಾನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ಓಡಾಡುವ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದು, ಕ್ಷಣಾರ್ಧದಲ್ಲಿ ಸರ ಎಗರಿಸಿ ಪರಾರಿಯಾಗುತ್ತಿದ್ದಾರೆ.

ವಾಸೀರ್ ಮೆನ್ ಪೇಟೆಯ ನಿವಾಸಿ ಮೇನಕಾ ಎಂಬವರು ವಾಲುವಾರ್ ನಗರದ ಉದ್ಯಾನವೊಂದರ ಬಳಿ ನಡೆದು ಹೋಗುತ್ತಿದ್ದಾಗ  ಮೊಬೈಕ್ ನಲ್ಲಿ ಬಂದ ಕಳ್ಳರು ಅವರನ್ನು ಕೆಳಗೆ ತಳ್ಳಿ 13 ಗ್ರಾಂ ಚಿನ್ನದ ಸರ ಕದ್ದು ಎಗರಿಸಿ ಪರಾರಿಯಾಗಿದ್ದಾರೆ.

ಮೇನಕಾ  ರಸ್ತೆಯಲ್ಲಿ ಹೊರಳಾಡುತ್ತಿದ್ದರೆ  10 ನೇ ಸೆಕೆಂಡ್ ನಲ್ಲಿಯೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆಕೆಯ ಕಾಲು ಮತ್ತು ಕೈಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರಾಘವೇಂದ್ರ ನಗರದ ಜಯಶ್ರೀ ಎಂಬವರು ತಮ್ಮ ಪತಿಯೊಂದಿಗೆ ಮನೆ  ಕಡೆಗೆ ಹೋಗುತ್ತಿರುವಾಗ ಅಲ್ಲಿಗೆ ಬಂದ ಕಳ್ಳರ ಸರ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೋಲಿಸರ ಮಾಹಿತಿ ಪ್ರಕಾರ 2017ರಲ್ಲಿ 616 ಸರಗಳ್ಳತನ ಹಾಗೂ 520 ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಇಂತಹ ಮೂರು ದರೋಡೆ ಪ್ರಕರಣಗಳು ಸರ್ವೇಸಾಮಾನ್ಯವಾಗಿವೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com