ನಗು, ರೇಣುಕಾ, ನಗು! ನಾವು ನಿಮ್ಮನ್ನ ಪ್ರೀತಿಸುತ್ತೇವೆ: ಶತ್ರುಘ್ನ

ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸಂಸದೆ ರೇಣುಕಾ ಚೌದರಿ ಪರ ಬ್ಯಾಟಿಂಗ್ ಬೀಸಿದ್ದಾರೆ. ರೇಣುಕಾ ಚೌದರಿಯನ್ನು ಬೆಂಬಲಿಸಿ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ರಾಜ್ಯಸಭೆ ಕಾಂಗ್ರೆಸ್ ಪಕ್ಷದ ಸದಸ್ಯೆ ರೇಣುಕಾ ಚೌದರಿ ಅವರ (ಸಾಂದರ್ಭಿಕ ಚಿತ್ರ)

ಸಂಸತ್ತಿನ ಬಜೆಟ್ ಅಧಿವೇಶನದ  ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಭಾಷಣ ಮಾಡುತ್ತಿದ್ದಾಗ ರೇಣುಕಾ ಚೌದರಿ ಗಹಗಹಿಸಿ ನಕ್ಕಿದ್ದರು. ಡಾಕ್ಟರ್ ಬಳಿ ತೋರಿಸಿಕೊಳ್ಳುವಂತೆ ಸಭಾಪತಿ ವೆಂಕಯ್ಯನಾಯ್ಡು ಸೂಚಿಸಿದ್ದರು.

ನಗು ರೇಣುಕಾ ನಗು ! ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮಗೆ ಒಳ್ಳೆಯದಾಗಲಿ, ಬೇಸರು ಮಾಡಿಕೊಳ್ಳಬೇಡಿ, ಸಂತೋಷದಿಂದ ಇರಿ. ಎಲ್ಲಾ ಒಳ್ಳೆಯದಾಗಲಿದೆ. ಯಾರು ಮಹಿಳೆಯರ ಸಬಲೀಕರಣವನ್ನೂ   ವಿರೋಧಿಸುತ್ತಾರೋ ಅಂತಹವರ ನಗು ಶೀಘ್ರದಲ್ಲಿಯೇ ಕರಗಲಿದೆ.ನಾರಿ ಶಕ್ತಿ ಧೀರ್ಘಕಾಲ ಉಳಿಯಲಿದೆ. ಜೈ ಹಿಂದ್ ಅಂತಾ ಶತ್ರುಘ್ನ ಸಿನ್ಹಾ ಟ್ವಿಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com