'ಮುಸ್ಲಿಮ್ ಹುತಾತ್ಮರು': ಒವೈಸಿ ಹೇಳಿಕೆ ವಿರುದ್ಧ ಸೇನೆ ಕಿಡಿ
ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮುಸ್ಲಿಮರೂ ಹುತಾತ್ಮರಾಗಿದ್ದಾರೆ ಎಂಬ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿಕೆಗೆ ಭಾರತೀಯ ಸೇನೆ ಅಸಮಾಧಾನ ವ್ಯಕ್ತಪಡಿಸಿದ್ದು..
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮುಸ್ಲಿಮರೂ ಹುತಾತ್ಮರಾಗಿದ್ದಾರೆ ಎಂಬ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿಕೆಗೆ ಭಾರತೀಯ ಸೇನೆ ಅಸಮಾಧಾನ ವ್ಯಕ್ತಪಡಿಸಿದ್ದು, ಸೇನೆ ಹುತಾತ್ಮರನ್ನು ನಿರ್ದಿಷ್ಟ ಕೋಮಿನ ಮೂಲಕ ಗುರುತಿಸುವುದಿಲ್ಲ ಎಂದು ಹೇಳಿದೆ.
ನಾವು ಹುತಾತ್ಮರಾದ ಯೋಧರನ್ನು ನಿರ್ದಿಷ್ಟ ಕೋಮಿನ ಅಡಿಯಲ್ಲಿ ಗುರುತಿಸುವುದಿಲ್ಲ, ಆ ರೀತಿಯ ಹೇಳಿಕೆ ನೀಡಿರುವವರು ಭಾರತೀಯ ಸೇನೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಿರುವುದಕ್ಕೆ ಪ್ರತ್ಯೇಕತಾವಾದಿಗಳ ಸಿದ್ಧಾಂತ ಯುವಕರನ್ನು ಆಕರ್ಷಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ ಎಂದು ಸೇನೆ ಇದೇ ವೇಳೆ ತಿಳಿಸಿದೆ.