ಕೈಕೊಟ್ಟ ಕರೆಂಟ್: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ವೈದ್ಯನಿಂದ ಶಸ್ತ್ರ ಚಿಕಿತ್ಸೆ!

ಶಸ್ತ್ರ ಚಿಕಿತ್ಸೆ ಮಧ್ಯೆ ಕರೆಂಟ್ ಕೈಕೊಟ್ಟ ಕಾರಣ ವೈದ್ಯರೊಬ್ಬರು ರೋಗಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮುಂದುವರಿಸಿದ ಘಟನೆ ಗುಂಟೂರು ಸರ್ಕಾರಿ ..
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Updated on: 
ಗುಂಟೂರು:  ಶಸ್ತ್ರ ಚಿಕಿತ್ಸೆ ಮಧ್ಯೆ ಕರೆಂಟ್ ಕೈಕೊಟ್ಟ ಕಾರಣ ವೈದ್ಯರೊಬ್ಬರು ರೋಗಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮುಂದುವರಿಸಿದ ಘಟನೆ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಆಪರೇಷನ್ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಫೆಬ್ರವರಿ 7 ರಂದು ಅಪಘಾತದಲ್ಲಿ ತಲೆಗೆ ಪೆಟ್ಟಾಗಿದ್ದ ಪಲ್ನಾಡಿನ ಪಿ,ವೆಂಕಮ್ಮ ಎಂಬುವರಿಗೆ ಆಪರೇಷನ್ ಮಾಡುತ್ತಿದ್ದರು, ಈ ವೇಳೆ ಆಪರೇಷನ್ ಥಿಯೇಟರ್ ನ ಕರೆಂಟ್ ಕಟ್ ಆಯಿತು. ಬೇರೆ ದಾರಿ ಕಾಣದ ವೈದ್ಯ ಮೊಬೈಲ್ ನ ಫ್ಲಾಶ್ ಲೈಟ್ ಬೆಳಕಿನಲ್ಲಿ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ  ಡಾ. ರಾಜು ನಾಯ್ಡು,ಆಪರೇಷನ್ ನಡೆಸುತ್ತಿರುವಾಗ ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆಯ್ತು. ಹೀಗಾಗಿ ಸೆಲ್ ಫೋನ್ ಬೆಳಕಿನಲ್ಲಿ ಆಪರೇಶನ್ ಮಾಡಲಾಯಿತು. ಇದನ್ನು ವಿಡಿಯೋ ಮಾಡಿ ಲೀಕ್ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com