

ಉತ್ತರ ಪ್ರದೇಶ: ಬಾಬ್ರಿ ಮಸೀದಿ, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗಡೆ ಇತ್ಯರ್ಥ್ಯವನ್ನು ಒಪ್ಪುವುದಿಲ್ಲ ಎಂದು ಮುಸ್ಲಿ ಸಮುದಾಯದ ಮೂವರು ಪ್ರತಿವಾದಿಗಳು ಹೇಳಿದ್ದಾರೆ.
ಪ್ರತಿವಾದಿಗಳಾದ ಹಜಿ ಮೆಹಬೂಬಾ, ಇಕ್ಬಲ್ ಅನ್ಸಾರಿ, ಮತ್ತು ಮೊಹಮ್ಮದ್ ಉಮರ್ ಅವರು ಆಯೋಧ್ಯೆಯಲ್ಲಿಂದು ಮುಸ್ಲಿಂ ಸಮುದಾಯದವರೊಂದಿಗೆ ಸಭೆ ನಡೆಸಿ,ಮಸೀದಿಯನ್ನು ಬೇರೊಂದು ನಿವೇಶನಕ್ಕೆ ಸ್ಥಳಾಂತರ ಮಾಡುವುದಿಲ್ಲ ಅಥವಾ ಯಾವುದೇ ಪಕ್ಷಕ್ಕೂ ಕೊಡುಗೆಯಾಗಿ ನೀಡುವುದಿಲ್ಲ ಎಂಬ ನಿರ್ಣಯವನ್ನು ಮಂಡಿಸಿದರು ಎಂಬ ಮಾಹಿತಿ ತಿಳಿದುಬಂದಿದೆ.
ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಮಾತ್ರ ವಿಶ್ವಾಸ ಇಟ್ಟಿದ್ದು, ನ್ಯಾಯಾಲಯದ ಹೊರಗಡೆ ವಿವಾದ ಇತ್ಯರ್ಥಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಾರೇಲ್ವಿ, ಡಿಯೋಬಾಂಡಿ ಮತ್ತು ಸಿಯಾ ಮುಸ್ಲಿಂ ಸಮುದಾಯ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ನಿರ್ಣಯಕ್ಕೆ ಸಹಿ ಹಾಕಿರುವ ಮೂವರು ಪ್ರತಿವಾದಿಗಳು ತಿಳಿಸಿದ್ದಾರೆ.
ಅಯೋಧ್ಯೆ ವಿವಾದ ಸಂಬಂಧ ಆರ್ಟ್ ಆಪ್ ಲೀವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಮತ್ತು ಮುಸ್ಲಿ ಕ್ಲಾರಿಕ್ ಮೌಲಾನ ಸಲ್ಮಾನ್ ನಾಡ್ವಿ ನ್ಯಾಯಾಲಯದ ಹೊರಗಡೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿರುವ ಬೆನ್ನಲ್ಲೆ ಈ ವಿದ್ಯಮಾನ ನಡೆದಿದ್ದು, ಈ ವಿವಾದ ಸದ್ಯಕ್ಕಂತೂ ಬಗೆಹರಿಯುವ ಸಾಧ್ಯತೆ ಕಂಡುಬರುತ್ತಿಲ್ಲ.