ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಗೆ ಮಾತ್ರ ಸಾಧ್ಯ: ಶರದ್ ಪವಾರ್

ಕಾಂಗ್ರೆಸ್ ಗೆ ಒಳ್ಳೆಯ ದಿನಗಳು ಬರಲಿದ್ದು, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಗೆ ಮಾತ್ರ ಸಾಧ್ಯ ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಶರದ್ ಪವಾರ್
ಶರದ್ ಪವಾರ್
Updated on: 

ಪುಣೆ: ಕಾಂಗ್ರೆಸ್ ಗೆ ಒಳ್ಳೆಯ ದಿನಗಳು ಬರಲಿದ್ದು, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಗೆ ಮಾತ್ರ ಸಾಧ್ಯ ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮರಾಠಿ ಅಕಾಡೆಮಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಂಎನ್ ಎಸ್ ಮುಖಂಡ ರಾಜ್ ಠಾಕ್ರೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಶರದ್ ಪವಾರ್, ಈ ಹಿಂದೆ ಕಾಂಗ್ರೆಸ್ ಗೆ ದೇಶವ್ಯಾಪಿ ಜಿಲ್ಲಾ ಮಟ್ಟದಿಂದಲೂ ಉತ್ತಮ ಸಂಘಟನೆ ಇತ್ತು. ಆದರೆ ಈಗ ಹಾಗಿಲ್ಲ. ಪಕ್ಷ ಬದಲಾಗುತ್ತಿದೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯೂ ಸಹ ಬದಲಾಗುತ್ತಿದ್ದಾರೆ. ಕಲಿಯಲು ಬಯಸುತ್ತಿದ್ದಾರೆ. ಬಿಜೆಪಿಗೆ ಎದುರಾಳಿಯಾಗುವ ಸಾಮರ್ಥ್ಯ ಇರುವುದು ಕಾಂಗ್ರೆಸ್ ಗೆ ಮಾತ್ರ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಬದಲಾವಣೆಯಾಗುತ್ತಿದ್ದು ಕಾಂಗ್ರೆಸ್ ಗೆ ಅಚ್ಛೆ ದಿನಗಳು ಬರಲಿವೆ ಎಂದು ಶರದ್ ಪವಾರ್ ವಿಶ್ವಾಸ ವ್ಯಕ್ತಪಾಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com