ಟಿಎಂಸಿಗೆ ಬೈಚುಂಗ್ ಭುಟಿಯಾ ವಿದಾಯ!

ಮಾಜಿ ಫುಟ್ಬಾಲಿಗ ಬೈಚುಂಗ್ ಭುಟಿಯಾ ತೃಣಮೂಲಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿರುವುದಾಗಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಮಾಜಿ ಫುಟ್ಬಾಲಿಗ ಬೈಚುಂಗ್ ಭುಟಿಯಾ ತೃಣಮೂಲಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಭುಟಿಯಾ, ನಾನು ತೃಣಮೂಲ ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಲನ್ನು ತೊರೆಯುತ್ತಿದ್ದೇನೆ. ಅಂತೆಯೇ ಇನ್ನಾವುದೇ ಪಕ್ಷಕ್ಕೂ ನಾನು ಸೇರ್ಪಡೆಯಾಗುತ್ತಿಲ್ಲ. ಯಾವುದೇ ರಾಜಕೀಯ ಚಟುವಟಿಕೆಯಲ್ಲ ನಾನು ತೊಡಗುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ತಾವು ರಾಜಕೀಯದಿಂದ ದೂರ ಉಳಿಯುವುದಾಗಿ ಭುಟಿಯಾ ಘೋಷಿಸಿಕೊಂಡಿದ್ದಾರೆ.
ಭಾರತ ಫುಟಬಾಲ್ ತಂಡದ ಪ್ರಮುಖ ಆಟಗಾರರಾಗಿದ್ದ ಭುಟಿಯಾ 2011ರಲ್ಲಿ ವೃತ್ತಿಪರ ಫುಟ್ಬಾಲ್ ಗೆ ವಿದಾಯ ಘೋಷಿಸಿದ್ದರು. ಬಳಿಕ 2013ರಲ್ಲಿ ಭುಟಿಯಾ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿ 2014ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಆದರೆ ಡಾರ್ಜಲಿಂಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com