ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳುನಾಡಿನಲ್ಲಿ ಪ್ರತಿ ಕ್ಷೇತ್ರದಿಂದಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸೂಚನೆ ನೀಡಿದ್ದು ಅದೇ ರೀತಿ ತೆಲುಗು ನಟ ಪವನ್ ಕಲ್ಯಾಣ್ ಸಹ ಆಂಧ್ರದಲ್ಲಿ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ರಜನಿಕಾಂತ್ ರಾಜಕೀಯದಲ್ಲಿ ಸಕ್ರಿಯರಾಗಿದ್ದು ಮುಂಬರುವ ತಮಿಳುನಾಡಿನ ವಿಧಾನಸಭೆಯಲ್ಲಿ ಪ್ರತಿಯೊಂದು ಕ್ಷೇತ್ರದಿಂದಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದು ಅದೇ ರೀತಿ ಆಂಧ್ರದಲ್ಲಿ ಪವನ್ ಕಲ್ಯಾಣ್ ಸಹ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಟ್ವೀಟಿಸಿದ್ದಾರೆ.
If @PawanKalyan doesn’t with guts contest in each and every seat of AP, both his fans and all telugu people will feel he’s just a very ordinary star and not a SUPERSTAR like @superstarrajini of the Tamil people
ಮತ್ತೊಂದು ಟ್ವೀಟ್ ನಲ್ಲಿ ಆಂಧ್ರದ ಪ್ರತಿಯೊಂದು ಕ್ಷೇತ್ರದಿಂದಲೂ ಪವನ್ ಕಲ್ಯಾಣ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ. ಅವರ ಅಭಿಮಾನಿಗಳು ಮತ್ತು ತೆಲುಗು ಜನರಿಗೆ ಪವನ್ ಕಲ್ಯಾಣ್, ರಜನಿಕಾಂತ್ ರಂತೆ ಸೂಪರ್ ಸ್ಟಾರ್ ಅಲ್ಲ, ಅವರು ಬರೀ ಒಬ್ಬ ನಟ ಎಂಬ ಭಾವನೆ ಬರುತ್ತದೆ ಎಂದು ಟ್ವೀಟಿಸಿದ್ದಾರೆ.
I wish @PawanKalyan will contest all seats in AP like @superstarrajini doing in TN ..if he doesn’t do,PK’s fans will feel he doesn’t have guts like Rajinikanth ..it will be an insult to telugu people’s prestige if our Superstar has lesser guts than the Superstar of Tamil people