ಮಧ್ಯಪ್ರದೇಶದಲ್ಲಿ ಗಣಿ ಕುಸಿತ: ಬಾಲ ಕಾರ್ಮಿಕ, ಮೂವರು ಮಹಿಳೆಯರು ಸಾವು

ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಡಬ್ಲ್ಯುಸಿಎಲ್) ನಡೆಸುತ್ತಿದ್ದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಕುಸಿದ ಪರಿಣಾಮ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೇತುಲ್: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಡಬ್ಲ್ಯುಸಿಎಲ್) ನಡೆಸುತ್ತಿದ್ದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಕುಸಿದ ಪರಿಣಾಮ 11 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. 
ಪಥಾರ್ ಖೇಡಾ ಪ್ರದೇಶದಲ್ಲಿ ಡಬ್ಲ್ಯುಸಿಎಲ್ ಗಣಿಗಾರಿಕೆ ನಡೆಸುತ್ತಿದ್ದು, ಸತ್ ಪುರ ಗಣಿ ಸಂಖ್ಯೆ 2ರಲ್ಲಿ ಗಣಿ ಕುಸಿದಿದ್ದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ಮಹಿಳೆ ಗಾಯಗೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ತನಿವಾರ್ ತಿಳಿಸಿದ್ದಾರೆ. 
ಮೃತರ ದೇಹವನ್ನು ಹೊರ ತೆಗಿದಿದ್ದು ಅವರನ್ನು 41 ವರ್ಷದ ನೀತು ಚೋರ್ಸೆ, ಮೀನಾ ಬೋರ್ಸೆ(40), ನಾನಿ ಬಾಯ್ ಪಡೇಕರ್(30) ಮತ್ತು ಪಾಯಲ್ ದೇಶ್ಮುಖ್(11) ಎಂದು ಗುರುತಿಸಲಾಗಿದೆ. 
ಗಣಿ ಕುಸಿತದಲ್ಲಿ ಗಾಯಗೊಂಡಿರುವ ಮಹಿಳೆಯನ್ನು 35 ವರ್ಷದ ಸಂಧ್ಯಾ ದೇವಿ ಎಂದು ಗುರುತಿಸಲಾಗಿದ್ದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com