ಮಧ್ಯಪ್ರದೇಶ: ಬಿಜೆಪಿ ಅಭ್ಯರ್ಥಿಗೆ ಚಪ್ಪಲಿ ಹಾಕಿದ ವಯೋವೃದ್ಧ! ವಿಡಿಯೋ ವೈರಲ್

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಮನೆ ಬಾಗಿಲಿಗೆ ಬಂದಾಗ ವಯೋವೃದ್ಧರೊಬ್ಬರು...
ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ
ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ
ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಮನೆ ಬಾಗಿಲಿಗೆ ಬಂದಾಗ ವಯೋವೃದ್ಧರೊಬ್ಬರು ಚಪ್ಪಲಿ ಹಾರ ಹಾಕಿರುವ ಘಟನೆ ವರದಿಯಾಗಿದೆ. 
ಭೋಪಾಲ್ ನ ಧಾಮನೋದ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು. ಈ ವೇಳೆ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡಿದ್ದಾರೆ. ಆಗ ಶರ್ಮಾ ಸ್ವಲ್ಪ ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದರೆ ನಂತರ ಅವರೇ ಹಾರ ಹಾಕಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಶರ್ಮಾ, ಅವರು ನನ್ನವರಲ್ಲಿ ಒಬ್ಬರು. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com