ಮೇವು ಹಗರಣ: ತೆರೆದ ಜೈಲಿನಲ್ಲಿರುವಂತೆ ಲಾಲು ಗೆ ಸಿಬಿಐ ನ್ಯಾಯಾಧೀಶರ ಸಲಹೆ

ಮೇವು ಹಗರಣದಲ್ಲಿ ಅಪರಾಧಿಗಳಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ನ್ಯಾಯಾಧೀಶ ಶಿವ್ ಪಾಲ್ ಸಿಂಗ್ ತೆರೆದ ಜೈಲಿನಲ್ಲಿರುವಂತೆ ಸಲಹೆ ನೀಡಿದ್ದಾರೆ.
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್
Updated on: 
ಜಲೌನ್: ಮೇವು ಹಗರಣದಲ್ಲಿ ಅಪರಾಧಿಗಳಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ನ್ಯಾಯಾಧೀಶ ಶಿವ್ ಪಾಲ್ ಸಿಂಗ್ ತೆರೆದ ಜೈಲಿನಲ್ಲಿರುವಂತೆ ಸಲಹೆ ನೀಡಿದ್ದಾರೆ.
ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರೂ ಸೇರಿದಂತೆ ಅಪರಾಧಿಗಳು ತೆರೆದ ಜೈಲಿನಲ್ಲಿದ್ದರೆ ಅಲ್ಲಿ ಜಾನುವಾರುಗಳನ್ನು ಮೇಯಿಸಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. 
ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ನಡೆದ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ಅಪರಾಧಿಗಳಿಗೆ ಜಾನುವಾರು ಔಷಧ ಹಾಗೂ ಮೇವಿನ ಬಗ್ಗೆ ಉತ್ತಮ ಮಾಹಿತಿ ಇರುತ್ತದೆ, ಆದ್ದರಿಂದ ಅವರನ್ನು ಜಾನುವಾರು ಮೇಯಿಸಲು ಅವಕಾಶ ಇರುವ ತೆರೆದ ಜೈಲಿನಲ್ಲಿರಿಸುವುದು ಸೂಕ್ತ ಯೋಜನೆ ಎಂದು ನ್ಯಾಯಾಧೀಶರು 
ಹೇಳಿದ್ದಾರೆ.  
ಅಪರಾಧಿಗಳ ಪೈಕಿ ಓರ್ವರು ತಮಗೆ ವಿಧಿಸಲಾಗಿರುವ ಶಿಕ್ಷೆಯನ್ನು 6 ತಿಂಗಳು ಕಡಿಮೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಜ.6 ರಂದು ಸಿಬಿಐ ವಿಶೇಷ ನ್ಯಾಯಾಲಯ ಮೇವು ಹಗರಣದ ಅಪರಾಧಿಗಳಿಗೆ 3.5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ದಂಡವನ್ನೂ ವಿಧಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com