ಉತ್ತರ ಪ್ರದೇಶ: ನಾಲ್ಕು ಮಕ್ಕಳ ತಾಯಿಗೆ ಫೋನ್ ಮೂಲಕ ತಲಾಖ್ ನೀಡಿದ ಪತಿ

36 ವರ್ಷದ ನಾಲ್ಕು ಮಕ್ಕಳ ತಾಯಿಗೆ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶ ಮಂಜಾನಪುರ್ ಕೊಟ್ವಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೌಷಂಬಿ: 36 ವರ್ಷದ ನಾಲ್ಕು ಮಕ್ಕಳ ತಾಯಿಗೆ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶ ಮಂಜಾನಪುರ್ ಕೊಟ್ವಲಿ ಪ್ರದೇಶದಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ತನ್ನ ಪತಿ ಸೋಹ್ರಾಬ್ ಕಿರುಕುಳದಿಂದ ಬೇಸತ್ತ ರೋಸಿ ಬೇಗಮ್ ಎಂಬ ಮಹಿಳೆ ಕೆಲವು ದಿನಗಳಿಂದ ಯಾರಿಗೂ ಹೇಳದೆ ತನ್ನ ಪೋಷಕರ ಮನೆ ಬಿಟ್ಟು ಹೋಗಿದ್ದಳು. ಶನಿವಾರ ಮನೆಗೆ ಮರಳಿದಾಗ, ಪತಿ ತನ್ನ ಸ್ವಗ್ರಾಮ ಚಾಂದೋಲಿ ಜಿಲ್ಲೆಯ ಮುಗಲ್ ಸರಾಯಿಗೆ ಹೋಗಿರುವುದು ಗೊತ್ತಾಗಿದೆ.
ಪತಿ ಎಲ್ಗಿಗೆ ಹೋಗಿದ್ದಾರೆ ಎಂಬುದು ತಿಳಿದುಕೊಳ್ಳಲು ರೋಸಿ ಸೋಹ್ರಾಬ್ ಗೆ ಫೋನ್ ಮಾಡಿದ್ದು, ಫೋನ್ ಸ್ವೀಕರಿಸಿದ ಪತಿ ಮಹಾಶಯ ಪತ್ನಿಗೆ ಮೂರು ಬಾಲಿ ತಲಾಖ್ ಹೇಳಿ, ಇನ್ನುಮುಂದೆ ನಿನ್ನೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸೋಹ್ರಾಬ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಪ್ರದೀಪ್ ಕುಮಾರ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com