ಅಮೆರಿಕ: ಮಹಿಳೆಗೆ ಲೈಂಗಿಕ ಕಿರುಕುಳ, ಎನ್ಆರ್ ಐ-ಗೂಗಲ್ ಟೆಕ್ಕಿ ಬಂಧನ

ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಎನ್ಆರ್ ಐ-ಗೂಗಲ್ ಟೆಕ್ಕಿಯೋರ್ವನನ್ನು ಬಂಧಿಸಲಾಗಿದೆ.
ಅಮೆರಿಕ: ಮಹಿಳೆಗೆ ಲೈಂಗಿಕ ಕಿರುಕುಳ, ಎನ್ಆರ್ ಐ-ಗೂಗಲ್ ಟೆಕ್ಕಿ ಬಂಧನ
ಅಮೆರಿಕ: ಮಹಿಳೆಗೆ ಲೈಂಗಿಕ ಕಿರುಕುಳ, ಎನ್ಆರ್ ಐ-ಗೂಗಲ್ ಟೆಕ್ಕಿ ಬಂಧನ
ನವದೆಹಲಿ: ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಎನ್ಆರ್ ಐ-ಗೂಗಲ್ ಟೆಕ್ಕಿಯೋರ್ವನನ್ನು ಬಂಧಿಸಲಾಗಿದೆ. 
ಜ.8 ರಂದು ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದ್ದು. ಅನ್ಮೋಲ್ ಸಿಂಗ್ ಖರ್ಬಂದ(22) 52 ವರ್ಷದ ಅಮೆರಿಕ ಮಹಿಳೆಗೆ ಐಶಾರಾಮಿ ಹೋಟೆಲ್ ನ ಬಾರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 
ಧೂಮಪಾನಕ್ಕಾಗಿ ಮಹಿಳೆಯೊಂದಿಗೆ ತನ್ನ ಕೋಠಡಿಗೆ ಕರೆದೊಯ್ದ ವೇಳೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ ಹೇಳಿದ್ದಾರೆ. 
ಕಾಂಟ್ರಾಕ್ಟ್ ಆಧಾರದಲ್ಲಿ ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅನ್ಮೋಲ್ ಖರಬಂದ ಈ ಕೃತ್ಯ ನಡೆದ ವೇಳೆ ಮದ್ಯದ ಮತ್ತಿನಲ್ಲಿದ್ದ ಎಂದು ತಿಳಿದುಬಂದಿದೆ. ಮಹಿಲೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಎನ್ಆರ್ ಐ ಟೆಕ್ಕಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com