ನವದೆಹಲಿ: ನ್ಯಾಯಮೂರ್ತಿ ಬಿಎಸ್ ಲೋಯ ಸಾವಿನ ಕುರಿತು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಈ ಮಧ್ಯೆ ನನ್ನ ತಂದೆಯ ಸಾವು ಕುಟುಂಬದಲ್ಲಿ ಸಾಕಷ್ಟು ನೋವು ತಂದಿದೆ. ನಮ್ಮ ತಂದೆಯ ಸಾವಿನ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಲೋಯ ಅವರ ಪುತ್ರ ಅನುಜ್ ಹೇಳಿದ್ದಾರೆ.
ಸಾಕಷ್ಟು ಬೆಳವಣಿಗೆಗಳ ನಂತರ ಭಾನುವಾರ ಮಾಧ್ಯಮದವರ ಮುಂದೆ ಬಂದ ನ್ಯಾಯಮೂರ್ತಿ ಲೋಯ ಪುತ್ರ ಅನುಜ್, ಈ ಮೊದಲು ನಮ್ಮ ತಂದೆಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿತ್ತು. ಆದರೆ ಈಗ ಎಲ್ಲವೂ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ಸೋಹ್ರಬುದ್ದೀನ್ ಶೇಖ್ ಪತ್ನಿ ಕೌಸರ್ ಬಿ, ಸಹವರ್ತಿ ತುಳಸಿ ಪ್ರಜಾಪತಿ ಅವರು 2005ರಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೃತಪಟ್ಟ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಲೋಯ ಅವರು 2014ರ ಡಿಸೆಂಬರ್ 1ರಂದು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು.