ಪ್ರತಿ ದಿನ ಹರ್ಯಾಣದಲ್ಲಿ ಅತ್ಯಾಚಾರವಾಗುತ್ತಿರುವ ವರದಿಗಳನ್ನು ಗಮನಿಸಿದರೆ ಹರ್ಯಾಣ ಭಾರತದ ರೇಪ್ ರಾಜಧಾನಿ ಎನಿಸಲು ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಷ್ಮಿತಾ ದೇವ್ ಹೇಳಿದ್ದಾರೆ. ಇದಕ್ಕಿಂತ ಘೋರವಾದುದ್ದೇನೆಂದರೆ ಹರ್ಯಾಣ ಮುಖ್ಯಮಂತ್ರಿಗಳು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕಾಂಗ್ರೆಸ್ ವಿರುದ್ಧವೇ ಆರೋಪಗಳನ್ನು ಹೊರಿಸಲು ಯತ್ನಿಸುತ್ತಿದ್ದಾರೆ ಎಂದು ಸುಷ್ಮಿತಾ ದೇವ್ ಆರೋಪಿಸಿದ್ದಾರೆ.