2019ರ ಲೋಕಸಭಾ ಚುನಾವಣೆ: ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಗೆ ಕಡಿಮೆ ಸ್ಥಾನ

ಸಮೀಕ್ಷೆಯೊಂದರಲ್ಲಿ ಶೇಕಡ 53 ರಷ್ಟು ಜನರು ನರೇಂದ್ರಮೋದಿ ಮತ್ತೆ ಪ್ರಧಾನಮಂತ್ರಿಯಾಗಬೇಕು ಎಂಬ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್ ಡಿಎಸರ್ಕಾರದ ಸಾಂದರ್ಭಿಕ ಚಿತ್ರ
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್ ಡಿಎಸರ್ಕಾರದ ಸಾಂದರ್ಭಿಕ ಚಿತ್ರ
Updated on: 

ದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು,ಸಮೀಕ್ಷೆಯೊಂದರಲ್ಲಿ ಶೇಕಡ 53 ರಷ್ಟು ಜನರು ನರೇಂದ್ರಮೋದಿ ಮತ್ತೆ ಪ್ರಧಾನಮಂತ್ರಿಯಾಗಬೇಕು ಎಂಬ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಇಂಡಿಯಾ ಟುಡೆ - ಕರ್ವೆ ಸಮೀಕ್ಷೆಯಂತೆ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಶೇಕಡಾ 22ರಷ್ಟಿದ್ದು, ಪ್ರಧಾನಿ ನರೇಂದ್ರಮೋದಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.

 ಈ ವರ್ಷದ ಸಮೀಕ್ಷೆ ಪ್ರಕಾರ ಶೇಕಡಾ 28 ರಷ್ಟು ಜನರು  ಸ್ವಾತಂತ್ರ್ಯ ನಂತರ ನರೇಂದ್ರಮೋದಿ ಉತ್ತಮ ಪ್ರಧಾನಿ ಎಂದು ಹೇಳಿದ್ದಾರೆ. ಶೇಕಡಾ 20 ರಷ್ಟು ಜನರು ಇಂದಿರಾಗಾಂಧಿ ಆಳ್ವಿಕೆಯನ್ನು ಈಗ ಹೋಲಿಸಿದರೆ ಸರಿಹೊಂದುವುದಿಲ್ಲ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಶೇಕಡಾ 51 ರಷ್ಟು ಮಂದಿ ನರೇಂದ್ರಮೋದಿ ದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇಕಡಾ 25 ರಷ್ಟು ಮಂದಿ ಸರಾಸರಿಯ ಅಭಿಪ್ರಾಯ ಹೊಂದಿದ್ದಾರೆ. ಆದಾಗ್ಯೂ, ಈಗಲೇ ಚುನಾವಣೆ ನಡೆದರೆ, ಎನ್ ಡಿಎ ಮೈತ್ರಿಕೂಟ 258 ಕ್ಷೇತ್ರಗಳಲ್ಲಿ ಜಯಗಳಿಸಿದೆ. 2014ರ ಚುನಾವಣೆಗೆ ಹೋಲಿಸಿದರೆ 24 ಕ್ಷೇತ್ರಗಳಲ್ಲಿ ಸ್ಥಾನ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಹೊರಬಂದಿದೆ.

  ಮೋದಿ ವೈಯಕ್ತಿಕ ವರ್ಚಸ್ಸಿನ ನಡುವೆಯೂ ಯುಪಿಎ ಮೈತ್ರಿಕೂಟದಲ್ಲಿ ಪ್ರಗತಿ ಕಂಡುಬಂದಿದ್ದು, 202 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com