ಅತ್ಯಾಚಾರ ಆರೋಪ: ಛತ್ತೀಸ್ ಗಢ ಗೃಹ ಸಚಿವರ ಸಂಬಂಧಿ ವಿರುದ್ಧ ತನಿಖೆ

ಅತ್ಯಾಚಾರ ಆರೋಪದ ಮೇಲೆ ಛತ್ತೀಸ್ ಗಢ ಗೃಹ ಸಚಿವ ರಾಮಸೇವಕ್‌ ಪೈಕ್ರಾ ಅವರ ಸೋದರ ಸಂಬಂಧಿ ಶಮೋಧ್‌....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ರಾಯಪುರ್: ಅತ್ಯಾಚಾರ ಆರೋಪದ ಮೇಲೆ ಛತ್ತೀಸ್ ಗಢ ಗೃಹ ಸಚಿವ ರಾಮಸೇವಕ್‌ ಪೈಕ್ರಾ ಅವರ ಸೋದರ ಸಂಬಂಧಿ ಶಮೋಧ್‌ ಪೈಕ್ರಾ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
21 ವರ್ಷದ ಮಹಿಳೆಯೊಬ್ಬರು ಸಚಿವರ ಸಂಬಂಧಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು, ಶಮೋಧ್‌ ಅವರು ಮದುವೆಯಾಗುವುದಾಗಿ ನಂಬಿಸಿ 2014ರಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ನಾವು ಶಮೋಧ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಸೂರಜಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರಿಜಾಶಂಕರ್ ಜೈಸ್ವಾಲ್ ಅವರು ಹೇಳಿದ್ದಾರೆ.
ಆರೋಪಿಯನ್ನು ಡಿಎನ್ಐ ಪರೀಕ್ಷೆಗೆ ಒಳಪಡಿಸುವುದು ಸೇರಿದಂತೆ ತನಿಖೆಯ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಅವರು ತಿಳಿಸಿದ್ದಾರೆ.
ನಾವು ಜತೆಯಾಗಿ ಕಲಿಯುತ್ತಿದ್ದ ದಿನಗಳಲ್ಲಿ ಪರಸ್ಪರ ನಿಕಟರಾಗಿದ್ದಾಗ ಶಮೋಧ್‌ ನನ್ನ ಸಖ್ಯ ಬೆಳೆಸಿಕೊಂಡು, ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ. ಇದರ ಪರಿಣಾಮ ನಾನು ಈಗ ಎರಡೂವರೆ ವರ್ಷದ ಮಗಳಿಗೆ ತಾಯಿಯಾಗಿರುವೆ ಎಂದು ಮಹಿಳೆ ಆರೋಪಿಸಿದ್ದಾರೆ. 
25 ವರ್ಷದ ಶಮೋಧ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ತನಿಖೆಗೆ ಸಹಕರಿಸುವ ವಿಶ್ವಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com