

ನವದೆಹಲಿ: ನಿರ್ಭಯ ನಿಧಿಯಡಿಯಲ್ಲಿ ಹಣಕಾಸು ಇಲಾಖೆಯಿಂದ ಅಗತ್ಯ ಅನುದಾನ ಪಡೆದುಕೊಳ್ಳುವಲ್ಲಿ ವಿಫಲವಾದ ಭಾರತೀಯ ರೈಲ್ವೆ ಎಲ್ಲಾ ನಿಲ್ದಾಣ , ಬೋಗಿಗಳು ಹಾಗೂ ದೇಶದ ಎಲ್ಲಾ ರೈಲ್ವೆ ಸಂಪರ್ಕ ಜಾಲವ್ಯವಸ್ಥೆಯಲ್ಲಿ ಜಾಗೃತಿ ವಹಿಸಿಲು 2 , 500 ಕೋಟಿ ಸಾಲ ಪಡೆಯಲು ಮುಂದಾಗಿದೆ.
ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್ ಎಫ್ ಸಿ) ಮೂಲಕ ರಾಷ್ಟ್ರೀಯ ಸಾಗಾಣಿಕಾ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ಪಡೆಯಬೇಕಾಗಿದೆ. ಇದು ವಿಸ್ತರಣೆಗೆ ಹಣಕಾಸಿನ ಮಾರುಕಟ್ಟೆಗಳಿಂದ ಮತ್ತು ಇತರೆ ಮಾರ್ಗಗಳಿಂದ ಚಾಲ್ತಿಯಲ್ಲಿರುವ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ.
ಸಿಸಿಟಿವಿ ಯೋಜನೆಗಾಗಿ ಒಟ್ಟಾರೇ 3 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಇದರಲ್ಲಿ 500 ಕೋಟಿ ರೂಪಾಯಿಯನ್ನು ನಿರ್ಭಯ ನಿಧಿಯಡಿಯಲ್ಲಿ ಹಣಕಾಸು ಸಚಿವಾಲಯ ಈಗಾಗಲೇ ಅನುದಾನ ಒದಗಿಸಿದೆ.
ಈ ಮಧ್ಯೆ 436 ಕೇಂದ್ರಗಳು ಸಿ.ಸಿ.ಟಿ.ವಿಗಳನ್ನು ಹೊಂದಿದ್ದು, 547 ಕೇಂದ್ರಗಳನ್ನು ಈ ವರ್ಷ ನಿರ್ಭಯ ನಿಧಿಯ ಅಡಿಯಲ್ಲಿ ಒಳಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ಆವರಣದಲ್ಲಿ ಸುರಕ್ಷತೆ ಮತ್ತು ಭದ್ರತೆ ಒದಗಿಸಲು 2018-19ರ ಬಟೆಟ್ ನಲ್ಲಿ ಭಾರತೀಯ ರೈಲ್ವೆ ಜಾಲದ 5, 121 ನಿಲ್ದಾಣ ಹಾಗೂ 58, 276 ಕೋಚ್ ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸಲು ಅನುಮೋದನೆ ದೊರೆತಿದೆ.
ಆದಾಗ್ಯೂ, ನಿರ್ಭಯ ನಿಧಿಯಡಿಯಲ್ಲಿ ಹಣಕಾಸು ಸಚಿವಾಲಯದಿಂದ ಅಗತ್ಯ ಅನುದಾನ ದೊರೆತಿಲ್ಲ. ಆದ್ದರಿಂದ ರೈಲ್ ಟೆಲ್ ಮೂಲಕ ಸಾಲ ಮರುಪಾವತಿಗಾಗಿ ಐಆರ್ ಎಫ್ ಸಿ ಮೂಲಕ 2500 ಕೋಟಿ ಸಾಲ ಪಡೆದುಕೊಳ್ಳಲು ನಿರ್ಧರಿಸಿದೆ. ರೈಲುಟೆಲ್ ರೈಲ್ವೆಯ ಟೆಲಿಕಾಂ ವಿಭಾಗವಾಗಿದ್ದು, ಸಿಸಿಟಿವಿ ವಿನಾಯಿತಿಯ ಜವಾಬ್ದಾರಿ ತೆಗೆದುಕೊಂಡಿದೆ.