ಚೆನ್ನೈ : 11 ವರ್ಷದ ಹುಡುಗಿ ಮೇಲೆ ಅತ್ಯಾಚಾರ, 17 ಜನರ ಬಂಧನ

ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಒಳಗಡೆ 11 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿ ಮೇಲೆ ಹಲವು ದಿನಗಳಿಂದ ಅತ್ಯಾಚಾರ ನಡೆಸಿದ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ : ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಒಳಗಡೆ 11 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿ ಮೇಲೆ ಹಲವು ದಿನಗಳಿಂದ ಅತ್ಯಾಚಾರ ನಡೆಸಿದ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿತರ ಪೈಕಿ ಅಪಾರ್ಟ್ ಮೆಂಟ್ ನ ಭದ್ರತಾ ಸಿಬ್ಬಂದಿಯೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ ಘಟನೆಯನ್ನು ತನ್ನ ಹಿರಿಯ ಅಕ್ಕನಿಗೆ ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪೋಷಕರ ಗಮನಕ್ಕೆ ತರಲಾಗಿದ್ದು, ಭಾನುವಾರ ದೂರು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ  ತಿಳಿಸಿರುವುದಾಗಿ  ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ತಂಪು ಪಾನೀಯದಲ್ಲಿ ನಿದ್ರೆ ಬರುವಂತಹ ವಸ್ತು ಸೇರಿಸಿ ಆ ಹುಡುಗಿಗೆ ನೀಡಲಾಗಿತ್ತು. ದೂರು ನೀಡದಂತೆ ಆಕೆಯನ್ನು ಬೆದರಿಸಲಾಗಿತ್ತು . ಬಂಧಿತರಲ್ಲಿ ಲಿಪ್ಟ್ ಮ್ಯಾನ್ , ನೀರು ಪೂರೈಕೆದಾರನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಹುಡುಗಿಯ ತಂದೆ ಕೆಲಸದ ನಿಮಿತ್ತ ಬಹು ದಿನಗಳವರೆಗೂ ಮನೆಗೆ ಬರುತ್ತಿರಲಿಲ್ಲ. ಈ ಮಧ್ಯೆ ಆಕೆಯ ತಾಯಿ ಗೃಹಿಣಿಯಾಗಿದ್ದು, ಶಾಲೆಯಿಂದ  ಬಾಲಕಿ ತಡವಾಗಿ ಬಂದರೂ ಏನೂ ಕೇಳುತ್ತಿರಲಿಲ್ಲ. ತನ್ನ ಮಗಳು ಕಾಂಪ್ಲೆಕ್ಸ್ ನಲ್ಲಿನ ಸ್ನೇಹಿತರೊಂದಿಗೆ ಆಟವಾಡುತ್ತಿರುವುದಾಗಿ ಭಾವಿಸಿಕೊಂಡಿದ್ದರು ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಅತ್ಯಾಚಾರಕ್ಕೀಡಾದ ಹುಡುಗಿಯನ್ನು ಕಿಲ್  ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪರೀಕ್ಷೆಯ ನಂತರ ಆಕೆಯ ಮೇಲೆ ಹಲವು ಮಂದಿ ಅತ್ಯಾಚಾರ ನಡೆಸಿರುವ ಸಂಗತಿಯನ್ನು  ವೈದ್ಯರು ದೃಢಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com