ಮಹಾರಾಷ್ಟ್ರ : ಬೈಕುಲಾ ಜೈಲಿನ 70 ಖೈದಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮುಂಬೈನ ಬೈಕುಲಾ ಜೈಲಿನ 70 ಖೈದಿಗಳು ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರ:  ಮುಂಬೈನ  ಬೈಕುಲಾ  ಜೈಲಿನ  70 ಖೈದಿಗಳು ಅಸ್ವಸ್ಥಗೊಂಡಿದ್ದು,  ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಖೈದಿಗಳಿಗೆ ವಾಂತಿ ಬೇಧಿ, ಹಾಗೂ ಉದರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡ ನಂತರ  ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಮುಂದುವರೆಸುತ್ತಿರುವುದಾಗಿ  ಆಸ್ಪತ್ರೆಯ ಸೂಪರಿಟೆಂಡೆಂಟ್  ಡಾ. ಸಂಜಯ್ ಸುರಾಸೆ  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಅಸ್ವಸ್ಥಗೊಂಡಿರುವ  ಖೈದಿಗಳನ್ನು 48 ಗಂಟೆಗಳ ಕಾಲ ಪರಿವೀಕ್ಷಣೆಗೆ ಇಡಲಾಗಿದೆ ಎಂದು ಡಾ. ವಿಕ್ವಾರ್ ಶೆಯ್ ಕು ಮಾಹಿತಿ ನೀಡಿದ್ದಾರೆ.

ಖೈದಿಗಳು ಅಸ್ವಸ್ಥಗೊಂಡಿರುವುದು ಏಕೆ ಎಂಬುದು ಪೂರ್ಣ ವರದಿ ಬಂದ ಬಳಿಕವೇ ತಿಳಿದುಬರಲಿದೆ ಎಂದು ಅವರು ತಿಳಿಸಿದ್ದಾರೆ.

 ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ  ಮತ್ತಿತರ ಹೈ ಪ್ರೋಫೈಲ್ ಆರೋಪಿಗಳು ಇದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com