ಚರ್ಚೆ ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, ಅದು ಬಿದ್ದು ಹೋಯಿತು ಎಂದು ಸ್ಪೀಕರ್ ಘೋಷಣೆ ಮಾಡಿದರು. ಆದರೆ, ನಂತರ ವಿರೋಧ ಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ 451 ಸದಸ್ಯರು ಹಾಜರಿದ್ದರು. ವಿಪಕ್ಷಗಳ ನಿರ್ಣಯದ ವಿರುದ್ಧ 325 ಮತಗಳು ಚಲಾವಣೆಯಾಗಿದೆ ಇನ್ನು ನಿರ್ಣಯದ ಪರ ಕೇವಲ 126 ಮತ ಚಲಾವಣೆಯಾಗಿದೆ. ಈ ಮೂಲಕ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಇನ್ನು ಬೆಂಬಲಿಸಿದ್ದ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿಯ ಕಟುಟೀಕಾಕಾರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಶಿವಸೇನೆ, ಟಿಆರ್'ಎಸ್, ಒಡಿಶಾದ ಬಿಜೆಡಿ ಸದಸ್ಯರು ನಿರೀಕ್ಷೆಯಂತೆಯೇ ಗೈರು ಹಾಜರಾಗಿದ್ದರು. ಎಐಡಿಎಂಕೆ ಸದಸ್ಯರು ಸರ್ಕಾರದ ಪರವಾಗಿ ಮತ ಹಾಕಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.