'ಒಟ್ಟು 3,29,91,385 ಅರ್ಜಿದಾರರ ಪೈಕಿ 2,89,83,677 ಅರ್ಜಿದಾರರು ಮಾತ್ರ ಎನ್ ಆರ್ ಸಿ ಸೇರ್ಪಡೆಗೆ ಅರ್ಹರಾಗಿದ್ದು. ಉಳಿದ 40,07,708 ಮಂದಿಯನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಪ್ರಸ್ತುತ ಈ 40 ಲಕ್ಷ ಮಂದಿಯನ್ನು ಏಕೆ ಕೈ ಬಿಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಇದು ಗೌಪ್ಯತೆಯ ವಿಚಾರವಾಗಿದೆ. ಅಂತೆಯೇ ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿ ಅಂತಿಮವೇನೂ ಅಲ್ಲ. ಪಟ್ಟಿಯಲ್ಲಿ ಹೆಸರಿಲ್ಲದ ಮಾತ್ರಕ್ಕೇ ಆತಂಕಗೊಳ್ಳುವ ಅಗತ್ಯವಿಲ್ಲ. ತಕರಾರು ಇರುವವರು ಅರ್ಜಿ ಹಾಕಿ ಮರು ಪರಿಶೀಲನೆಗೆ ಮನವಿ ಮಾಡಬಹುದು. ಅಂತಿಮ ಪಟ್ಟಿಯನ್ನು 2018ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹಲೇಜಾ ಹೇಳಿದರು.