ಎನ್ಆರ್ ಸಿ ಪರಿಷ್ಕೃತ ಕರಡು ಬಿಡುಗಡೆ: ಶಾಂತಿ ಕಾಪಾಡುವಂತೆ ಅಸ್ಸಾಂ ಸಿಎಂ ಮನವಿ

ನಾಗರಿಕರ ರಾಷ್ಟ್ರೀಯ ನೋಂದಣಿ ಕರಡು ಬಿಡುಗಡೆ ಹಿನ್ನಲೆಯಲ್ಲಿ ಅಸ್ಸಾಂ ಜನತೆಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಸಿಎಂ ಸರ್ಬಾನಂದ ಸೋನಾವಾಲ್
ಸಿಎಂ ಸರ್ಬಾನಂದ ಸೋನಾವಾಲ್
Updated on: 
ಗುವಾಹತಿ: ನಾಗರಿಕರ ರಾಷ್ಟ್ರೀಯ ನೋಂದಣಿ ಕರಡು ಬಿಡುಗಡೆ ಹಿನ್ನಲೆಯಲ್ಲಿ ಅಸ್ಸಾಂ ಜನತೆಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ನಾಗರಿಕರ ರಾಷ್ಟ್ರೀಯ ನೋಂದಣಿಗಾಗಿ ನಡೆದ ಜನಗಣತಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಸ್ಸಾಂ ಜನತೆಗೆ ಧನ್ಯವಾದ ಹೇಳಿರುವ ಸಿಎಂ ಸೋನಾವಾಲ್ ಅವರು, ಅಕ್ರಮ ವಲಸಿಗರನ್ನು ಗುರುತಿಸುವ ಸಲುವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಸ್ಸಾಂ ಜನತೆಗೆ ಧನ್ಯವಾದ ಹೇಳುತ್ತೇನೆ. ಅಂತೆಯೇ ಕರಡು ಬಿಡುಗಡೆ ಬಳಿಕವೂ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.
ಇನ್ನು ಇಂದು ಬೆಳಗ್ಗೆ ನಾಗರಿಕರ ರಾಷ್ಟ್ರೀಯ ನೋಂದಣಿ ಕರಡು ಬಿಡುಗಡೆಯಾಗಿದ್ದು, ಸುಮಾರು 3.29 ಕೋಟಿ ಮಂದಿಯ ಪೈಕಿ 2.89 ಕೋಟಿ ಮಂದಿ ಅಸ್ಸಾಂ ನಾಗರಿಕರು ಎಂದು ಸ್ವೀಕರಿಸಲಾಗಿದ್ದು, ಉಳಿದ 40 ಲಕ್ಷ ಮಂದಿಯನ್ನು ಅಕ್ರಮ ವಲಸಿಗರು ಎಂದು ಗುರುತಿಸಲಾಗಿದೆ. ಇನ್ನು ಅಂತಿಮ ಕರಡು 2018ರ ಡಿಸೆಂಬರ್ ನಲ್ಲಿ ಪ್ರಕಟವಾಗಲಿದೆ ಎಂದು ಎನ್ ಆರ್ ಸಿ ಅಸ್ಸಾಂ ಸಂಯೋಜಕ  ಅಧಿಕಾರಿ ಪ್ರತೀಕ್ ಹಲೇಜಾ ಅವರು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com