3 ವರ್ಷದ ಮಗುವನ್ನು ನದಿಗೆ ಎಸೆದು ಆತ್ಮಹತ್ಯೆಗೆ ಶರಣಾದ ಸಲಿಂಗಿ ದಂಪತಿ

ಸಬರಮತಿ ನದಿಗೆ ಮೂರು ವರ್ಷದ ಮಗುವನ್ನು ಎಸೆದ ಸಲಿಂಗಿ ದಂಪತಿಗಳು ತಾವು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅಹಮದಾಬಾದ್: ಸಬರಮತಿ ನದಿಗೆ ಮೂರು ವರ್ಷದ ಮಗುವನ್ನು ಎಸೆದ ಸಲಿಂಗಿ ದಂಪತಿಗಳು ತಾವು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 
ನಾವು ಒಂದಾಗಿರಲು ಈ ಪ್ರಪಂಚ ಬಿಡಲಿಲ್ಲ. ಹೀಗಾಗಿ ಈ ಪ್ರಪಂಚದಿಂದಲೇ ದೂರ ಹೋಗುವುದಾಗಿ ಆತ್ಮಹತ್ಯೆ ಪತ್ರದಲ್ಲಿ ಸಲಿಂಗಿ ದಂಪತಿಗಳು ಬರೆದಿದ್ದಾರೆ. 
ತಮ್ಮ ಸಲಿಂಗ ದಾಂಪತ್ಯ ಜೀವನಕ್ಕೆ ಉಂಟಾದ ಅಡಚಣೆಯಿಂದ ನೊಂದು ಇಬ್ಬರು ಮಹಿಳೆಯರು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಈ ದಂಪತಿಯ ಪೈಕಿ ಓರ್ವ ಮಹಿಳೆ ಅದಾಗಲೇ ಮದುವೆಯಾಗಿದ್ದು ಆಕೆಗೆ ಮೂರು ವರ್ಷದ ಮಗುವಿತ್ತು. ಈ ಮಗುವನ್ನು ಮೊದಲಿಗೆ ನದಿಗೆ ಹಾಕಿ ನಂತರ ಇಬ್ಬರು ಸಲಿಂಗಿ ದಂಪತಿ ನದಿಗೆ ಹಾರಿದ್ದಾರೆ. 
ಮೃತರನ್ನು 30 ವರ್ಷದ ಆಶಾ, 28 ವರ್ಷದ ಭಾವನಾ ಹಾಗೂ 3 ವರ್ಷದ ಮೇಘಾ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com