ಇಂದೋರ್: ಬಾಲಿವುಡ್ ನ ಖ್ಯಾತ ನಟಿಯರಾದ ನರ್ಗೀಸ್, ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್ ರಂತೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ರನ್ನು ಯಾಕೆ ಕಾಣಬಾರದು ಎಂದು ಪಾಟಿದಾರ್ ಸಮುದಾಯ ನಾಯಕ ಹಾರ್ದಿಕ್ ಪಟೇಲ್ ಪ್ರಶ್ನಿಸಿದ್ದಾರೆ.
ಸನ್ನಿ ಲಿಯೋನ್ ಈ ಹಿಂದೆ ನೀಲಿ ಚಿತ್ರಗಳಲ್ಲಿ ಅಭಿನಯಿಸಿರಬಹುದು. ಆದರೆ ಈಗ ಆಕೆ ಓರ್ವ ಪ್ರಬುದ್ಧ ನಟನೆಯ ಮೂಲಕ ಸ್ವತಂತ್ರವಾದ ಒಂದು ಇಮೇಜ್ ಅನ್ನು ಸೃಷ್ಟಿಸಿಕೊಂಡಿದ್ದಾರೆ. ಹೀಗಿರುವಾಗ ಅವರನ್ನು ನೀಲಿ ಚಿತ್ರತಾರೆಯಂತೆ ಯಾಕೆ ಕಾಣಬೇಕು ಎಂದು ಹಾರ್ದಿಕ್ ಪಟೇಲ್ ಸನ್ನಿ ಲಿಯೋನ್ ರನ್ನು ಸಮರ್ಥಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಹಾರ್ದಿಕ್ ಪಟೇಲ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸನ್ನಿ ಲಿಯೋನ್ ಳನ್ನು ನಾವು ಇನ್ನೂ ಕೂಡ ನೀಲಿ ತಾರೆಯಂತೆ ಕಾಣುವುದಾದರೆ ದೇಶ ಎಂದೂ ಬದಲಾಗದು ಎನ್ನುವುದು ನಿಶ್ಚಿತ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರೊಂದಿಗೆ ಸನ್ನಿ ಲಿಯೋನ್ ಹೆಸರು ಕೂಡ ಈಚೆಗೆ 2 ಸಾವಿರ ಕೋಟಿ ರೂಪಾಯಿ ಬಿಟ್ ಕಾಯಿನ್ ಹಗರಣದಲ್ಲಿ ಕಾಣಿಸಿಕೊಂಡಿತ್ತು.