ಕೇಜ್ರಿವಾಲ್ ಜತೆಗೆ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಮಂತ್ರಿಗಳಾದ ಸತ್ಯೇಂದರ್ಜೈನ್ ಮತ್ತು ಗೋಪಾಲ್ ರೈ ಸಹ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಲೆ. ಗವರ್ನರ್ ತಾವು ಐಎಎಸ್ ಅಧಿಕಾರಿಗಳು ತಮ್ಮ "ಮುಷ್ಕರ" ವನ್ನು ಅಂತ್ಯಗೊಳಿಸಲು ಆದೇಶಿಸಬೇಕು, ಮನೆಬಾಗಿಲಿಗೆ ಪಡಿತರ ವ್ಯವಸ್ಥೆ ಜಾರಿಗೆ ಅವಕಾಶ ನೀಡಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ.