ಇಂದಿನಿಂದ ರಾಷ್ಟ್ರಪತಿ ಕೋವಿಂದ್ 3 ರಾಷ್ಟ್ರಗಳ ವಿದೇಶ ಪ್ರವಾಸ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ರಾಷ್ಟ್ರಗಳ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಗ್ರೀಸ್, ಸೂರಿನೇಮ್ ಮತ್ತು ಕ್ಯೂಬಾ....
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್
Updated on
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ರಾಷ್ಟ್ರಗಳ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಗ್ರೀಸ್, ಸೂರಿನೇಮ್ ಮತ್ತು ಕ್ಯೂಬಾ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿಗಳ ಜೊತೆಗೆ ವಿವಿಧ ಸಂಸದರು ಹಾಗೂ ರಾಜ್ಯ ಸಚಿವರು ತೆರಳಲಿದ್ದಾರೆ.
ಮೊದಲು ಅಥೆನ್ಸ್ ಗೆ ಭೇಟಿ ನೀಡುವ ಕೋವಿಂದ್ ನಂತರ ಗ್ರೀಕ್ ಅಧ್ಯಕ್ಷ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಮಂಗಳವಾರ ಸೂರಿನೇಮ್ ಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರ ಜೊತೆಗೆ ಮೀಟಿಂಗ್ ನಡೆಸಲಿದ್ದಾರೆ, ಜೊತೆಗೆ ರಾಷ್ಚ್ರೀಯ ಮಟ್ಟದ ಅಧಿಕಾರಿಗಳೊಂದಿಗೆ ಕೂಡ ಸಭೆ ನಡೆಸಲಿದ್ದಾರೆ. 
ಇದೇ ವೇಳೆ ವೈದ್ಯಕೀಯ, ಚುನಾವಣೆ, ಐಟಿ ಮತ್ತು ಆಯುರ್ವೇದ ಸೇರಿದಂತೆ ಹಲವು ವಿಷಯಗಳ ಸಂಬಂಧ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ, 
ಜೂನ್ 21 ರಂದು ಕ್ಯೂಬಾಗೆ  ಆಗಮಿಸುವ ರಾಷ್ಟ್ರಪತಿ ಅಲ್ಲಿನ ಅಧ್ಯಕ್ಷರ ಜೊತೆ ಚರ್ಚೆ ನಡೆಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com