ರೈಲ್ವೆ ನಿಲ್ದಾಣದಲ್ಲೇ ಆರ್‌ಪಿಎಫ್ ಪೊಲೀಸ್‍ನಿಂದ ಮಹಿಳೆಗೆ ಲೈಂಗಿಕ ಕಿರುಕುಳ, ಪೇದೆಗೆ ಕಪಾಳಮೋಕ್ಷ!

ರೈಲ್ವೆ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಕಲ್ಯಾಣ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಪೊಲೀಸ್ ಸಿಕ್ಕಿಬಿದ್ದಿದ್ದಾರೆ...
ಆರ್‌ಪಿಎಫ್ ಪೊಲೀಸ್‍
ಆರ್‌ಪಿಎಫ್ ಪೊಲೀಸ್‍
Updated on
ಮುಂಬೈ: ರೈಲ್ವೆ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಕಲ್ಯಾಣ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಪೊಲೀಸ್ ಸಿಕ್ಕಿಬಿದ್ದಿದ್ದಾರೆ. 
ಕಳೆದ ರಾತ್ರಿ ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ 11.30ರ ಸುಮಾರಿಗೆ ಫ್ಲಾಟ್ ಫಾರ್ಮ್ ನಲ್ಲಿ ಕುಳಿತುಕೊಂಡಿದ್ದ ಮಹಿಳೆಯ ದೇಹವನ್ನು ಆರ್‌ಪಿಎಫ್ ಪೊಲೀಸ್ ಮುಟ್ಟುತ್ತಿದ್ದಾಗ ಎದುರುಗಡೆ ಕುಳಿತಿದ್ದ ವ್ಯಕ್ತಿಯೊಬ್ಬರು ಇದನ್ನು ತಮ್ಮ ಮೊಬೈಲ್ ಸೆರೆಹಿಡಿದಿದ್ದಾರೆ. 
ನಂತರ ಅಲ್ಲಿದ್ದವರೆಲ್ಲಾ ಸೇರಿ ಆರ್‌ಪಿಎಫ್ ಪೊಲೀಸ್ ಗೆ ಕಪಾಳಮೋಕ್ಷ ಮಾಡಿ, ಭದ್ರತಾ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ. ಆರ್‌ಪಿಎಫ್ ಪೊಲೀಸ್ ನನ್ನು ರಾಜೇಶ್ ಜಹಂಗೀರ್ ಎಂದು ಗುರುತಿಸಲಾಗಿದೆ. 
ಈ ವಿಡಿಯೋವನ್ನು ಕಂಡ ಕೇಂದ್ರ ರೈಲ್ವೆಯ ವಿಭಾಗೀಯ ಆಯುಕ್ತರು ಸಚಿನ್ ಬಲೋದೆ ಅವರು ರಾಜೇಶ್ ಜಹಂಗೀರ್ ಅಮಾನತು ಮಾಡಿದ್ದು ಆತನ ವಿರುದ್ಧ ತನಿಖೆಗೆ ಸೂಚಿಸಿದ್ದಾರೆ. 
ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆರ್‌ಪಿಎಫ್ ಪೊಲೀಸ್ ಕೃತ್ಯವನ್ನು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com