ಜಾರ್ಖಾಂಡ್: ಬೆಳೆಗಳಿಗೆ ಬರುತ್ತಿದ್ದ ನೀರು ಸ್ಥಗಿತ; ನೊಂದ ರೈತ ಆತ್ಮಹತ್ಯೆಗೆ ಶರಣು

ಕೃಷಿ ಭೂಮಿಗೆ ಬರುತ್ತಿದ್ದ ನೀರನ್ನು ಅರಣ್ಯಾಧಿಕಾರಿಗಳು ಸ್ಥಗಿತಗೊಳಿಸಿದ ಪರಿಣಾಮ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರ್ಖಾಂಡ್'ನ ಗುಮ್ಲಾ ಜಿಲ್ಲೆಯಲ್ಲಿನ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ರಾಂಚಿ: ಕೃಷಿ ಭೂಮಿಗೆ ಬರುತ್ತಿದ್ದ ನೀರನ್ನು ಅರಣ್ಯಾಧಿಕಾರಿಗಳು ಸ್ಥಗಿತಗೊಳಿಸಿದ ಪರಿಣಾಮ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರ್ಖಾಂಡ್'ನ ಗುಮ್ಲಾ ಜಿಲ್ಲೆಯಲ್ಲಿನ ನಡೆದಿದೆ. 
ಬಲ್ಕೇಶ್ವರ್ ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ. ಕೃಷಿ ಭೂಮಿಗೆ ಬರುತ್ತಿದ್ದ ನೀರನ್ನು ಅರಣ್ಯಾಧಿಕಾರಿಗಳು ಸ್ಥಗಿತಗೊಳಿಸಿದ್ದರಿಂದಾಗಿ ಕಳೆದ ಒಂದು ವಾರದಿಂದ ಬಲ್ಕೇಶ್ವರ್ ಅವರು ಚಿಂತೆಗೀಡಾಗಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. 
ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ ಮಂಡಳಿ, ಪ್ರಕರಣ ಕುರಿತು ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ರೀತಿಯ ಹೇಳಿಕೆಯನ್ನು ನೀಡುವುದಿಲ್ಲ. ಅರಣ್ಯಾಧಿಕಾರಿಗಳು ರೈತನ ಕೃಷಿ ಭೂಮಿಗೆ ಹೋಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದರು. ಹೀಗಾಗಿ ಆತ ಆತ್ಮಹತ್ಯೆಗೆ ಶರಣಾಗಿರಬಹುದು. ತನಿಖೆ ಪೂರ್ಣಗೊಂಡ ಬಳಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ,
ಬಲ್ಕೇಶ್ವರ್ ಅವರ ಪತ್ನಿ ರುಕ್ಮಿಣಿ ಮಾತನಾಡಿ, ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್'ಗೆ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಭೂಮಿಯ ಬಳಿಯೇ ದೊಡ್ಡ ಮಟ್ಟದ ಹಳ್ಳವೊಂದನ್ನು ಅಗೆಯಲಾಗಿತ್ತು. ಈ ಹಳ್ಳದಲ್ಲಿ ತುಂಬಿದ್ದ ನೀರನ್ನು ಬಲ್ಕೇಶ್ವರ್ ತನ್ನ ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದ. ಈ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಬಲ್ಕೇಶ್ವರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ನೀರನ್ನು ಬಳಸಿಕೊಂಡಿದ್ದೇ ಆದರೆ, ಜೈಲಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. 
ಅರಣ್ಯಾಧಿಕಾರಿಗಳ ಕಠಿಣ ಎಚ್ಚರಿಕೆಯಿಂದಾಗಿ ತೀವ್ರ ಚಿಂತಿಗೀಡಾಗಿದ್ದ ಬಲ್ಕೇಶ್ವರ್ ದಿನಗೂಲಿ ಕೆಲಸ ಮಾಡಲು ಆರಂಭಿಸಿದ್ದ. ದಿನಕ್ಕೆ ರೂ.200 ಬರುತ್ತಿದ್ದರಿಂದ ಕುಟುಂಬವನ್ನು ಸಲಹುವುದು ಕಷ್ಟವಾಗಿತ್ತು. ಹೀಗಾಗಿ ತೀವ್ರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ರುಕ್ಮಿಣಿಯವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com