ಭೂಮಿ ಉಳುಮೆ ನಿಲ್ಲಿಸುವಂತೆ ಟ್ರಾಕ್ಟರ್ ಮುಂದೆ ತನ್ನ ತಾಯಿಯನ್ನೆ ಎಸೆದ ಮಗ !

ಎದುರಾಳಿ ಭೂಮಿ ಉಳುಮೆ ನಿಲ್ಲಿಸುವಂತೆ ಮಗನೊಬ್ಬ ತನ್ನ ತಾಯಿಯನ್ನೆ ಟ್ರಾಕ್ಟರ್ ಮುಂದೆ ಎಸೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯಲ್ಲಿ ನಡೆದಿದೆ.
ಟ್ರಾಕ್ಟರ್ ಮುಂದೆ ಎಸೆದಿರುವ ತಾಯಿ ಚಿತ್ರ
ಟ್ರಾಕ್ಟರ್ ಮುಂದೆ ಎಸೆದಿರುವ ತಾಯಿ ಚಿತ್ರ
Updated on

ವಾಸಿಮ್ :  ಎದುರಾಳಿ ಭೂಮಿ ಉಳುಮೆ ನಿಲ್ಲಿಸುವಂತೆ   ಮಗನೊಬ್ಬ ತನ್ನ ತಾಯಿಯನ್ನೆ ಟ್ರಾಕ್ಟರ್ ಮುಂದೆ ಎಸೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ವಾಸಿಮ್  ಜಿಲ್ಲೆಯಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೇಗಾವ್  ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು,  ಒಬ್ಬನನ್ನು ಬಂಧಿಸಿದ್ದಾರೆ.

ಭೂಮಿ ವಿವಾದವೇರ್ಪಟ್ಟಿದ್ದ ವ್ಯಕ್ತಿ ಟ್ರಾಕ್ಟರ್ ನಲ್ಲಿ ಭೂಮಿ ಉಳುತ್ತಿದ್ದಾಗ ತಡೆಯಲು ಮುಂದಾದ ಮಗ, ತನ್ನ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದಿದ್ದಾನೆ.  

 ಭೂ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಎರಡು ಕಡೆಯವರ ಮೇಲೂ ಎಫ್ ಐಆರ್ ದಾಖಲಿಸಲಾಗಿದೆ.  ಒಬ್ಬನನ್ನು ಬಂಧಿಸಲಾಗಿದ್ದು, ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಮಾಲೇಗಾವ್ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್  ಸುರೇಶ್ ನಾಯಕ್  ನಾವಾರೆ ತಿಳಿಸಿದ್ದಾರೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com