ಛತ್ತೀಸ್ ಗಢ : ಭದ್ರತಾ ಪಡೆಗಳ ಮುಂದೆ ಮೂವರು ನಕ್ಸಲೀಯರು ಶರಣಾಗತಿ

ಛತ್ತೀಸ್ ಗಢ ರಾಜ್ಯದ ಬಸ್ತರ್ ನಲ್ಲಿ ಹೊಸ ಬದುಕು ಆರಂಭಿಸುವ ಗುರಿಯೊಂದಿಗೆ ಮೂವರು ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.ಸ್ಥಳೀಯ ನಕ್ಸಲ್ ಗುಂಪಿನಲ್ಲಿದ್ದ ಸಂತು, ರಾಮು, ಮತ್ತು ಜಗರಾಮ್ ನಿನ್ನೆ ದಿನ ಶರಣಾಗಿದ್ದಾರೆ.
ಶರಣಾದ ನಕ್ಸಲೀಯರ ಚಿತ್ರ
ಶರಣಾದ ನಕ್ಸಲೀಯರ ಚಿತ್ರ
Updated on: 
ಬಸ್ತರ್ : ಛತ್ತೀಸ್ ಗಢ ರಾಜ್ಯದ ಬಸ್ತರ್ ನಲ್ಲಿ  ಹೊಸ ಬದುಕು ಆರಂಭಿಸುವ  ಗುರಿಯೊಂದಿಗೆ ಮೂವರು ನಕ್ಸಲೀಯರು   ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.ಸ್ಥಳೀಯ ನಕ್ಸಲ್ ಗುಂಪಿನಲ್ಲಿದ್ದ ಸಂತು, ರಾಮು, ಮತ್ತು ಜಗರಾಮ್ ನಿನ್ನೆ ದಿನ ಶರಣಾಗಿದ್ದಾರೆ.
ಈ ಪೈಕಿ ಸಂತು  ಕಮಾಂಡರ್ ರೈಜು ಬಳಿ ಕೆಲಸದಲ್ಲಿದ್ದು, ಹಳ್ಳಿಗರನ್ನು ವಶದಲ್ಲಿಟ್ಟುಕೊಳ್ಳಲು ಹಾಗೂ ಆಹಾರ ಧಾನ್ಯ ಸಂಗ್ರಹಿಸಲು ಆತನನ್ನು ಬಳಸಲಾಗುತ್ತಿತಂತೆ. ಆದಾಗ್ಯೂ, ತಮ್ಮ ಕುಟುಂಬದ ಜವಾಬ್ದಾರಿ ಹೊರಬೇಕೆಂಬ ಗುರಿಯೊಂದಿಗೆ ಶರಣಾಗಿರುವುದಾಗಿ ಆತ ಹೇಳಿದ್ದಾನೆ.
ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಯಿಂದ ಪೋಷಕರು ಆತಂಕಗೊಂಡಿದ್ದು,  ಅವರ ಬಳಿಗೆ ತಾವೂ ಹೋಗಬೇಕು. ತಮ್ಮ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಸಾಮಾನ್ಯರಂತೆ ಜೀವನ ಸಾಗಿಸುವುದಾಗಿ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com