ಮತ್ತೆ ಪೈಸೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿತ, ಹೊಸ ದರ ಪಟ್ಟಿ ಇಲ್ಲಿದೆ

ವ್ಯಾಪಕ ಚರ್ಚೆಗೆ ಗ್ರಾ,ವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಇದೀಗ ಮತ್ತೆ ಸುದ್ದಿಯಾಗಿದ್ದು, ದರ ಇಳಿಕೆಯಾಗಿದೆ ಯಾದರೂ ಮತ್ತೆ ಪೈಸೆಗಳಲ್ಲೆ ದರ ಇಳಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ವ್ಯಾಪಕ ಚರ್ಚೆಗೆ ಗ್ರಾ,ವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಇದೀಗ ಮತ್ತೆ ಸುದ್ದಿಯಾಗಿದ್ದು, ದರ ಇಳಿಕೆಯಾಗಿದೆ ಯಾದರೂ ಮತ್ತೆ ಪೈಸೆಗಳಲ್ಲೆ ದರ ಇಳಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದೊಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ನಿರಂತರ ಇಳಿಖೆಯಾಗುತ್ತಿದೆಯಾದರೂ, ಪೈಸೆಗಳಲ್ಲಿ ದರ ಇಳಿಕೆಯಾಗಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣಾವಾಗಿದೆ. ಕಳೆದ ಮೇ 30 ರಿಂದ ಆರಂಭವಾದ ಈ ಟ್ರೆಂಡ್ ನಿಂದಾಗಿ ಈ ವರೆಗೂ ಪೆಟ್ರೋಲ್ ದರದಲ್ಲಿ 2.88 ರೂ ಇಳಿಕೆಯಾದಂತಾಗಿದೆ. 
ಇನ್ನು ಮಂಗಳವಾರ ಪೆಟ್ರೋಲ್ ದರದಲ್ಲಿ 14ರಿಂದ 18 ಪೈಸೆಯವರೆಗೂ ಇಳಿಕೆಯಾಗಿದ್ದು, ದೆಹಲಿ ಮತ್ತು ಕೋಲ್ಕತಾ ದಲ್ಲಿ 14 ಪೈಸೆ, ಮುಂಬೈನಲ್ಲಿ 18 ಪೈಸೆ ಮತ್ತು ಚೆನ್ನೈನಲ್ಲಿ 15ಪೈಸೆಯಷ್ಟು ದರ ಇಳಿಕೆಯಾಗಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಇಂತಿದ್ದು, ದೆಹಲಿಯಲ್ಲಿ ಪ್ರತೀ ಲೀಟರ್ ಗೆ 75.55 ರೂ, ಕೋಲ್ಕತಾದಲ್ಲಿ 78.23 ರೂ, ಮುಂಬೈನಲ್ಲಿ 83.12 ಮತ್ತು ಚೆನ್ನೈ ನಲ್ಲಿ  78.40 ರೂಗಳಷ್ಟಿದೆ.
ಅಂತೆಯೇ ಡೀಸೆಲ್ ದರ ಕೂಡ 10 ಪೈಸೆಯಷ್ಟು ಇಳಿಕೆಯಾಗಿದ್ದು, ದೆಹಲಿ, ಚೆನ್ನೈ ಮತ್ತು ಕೋಲ್ಕತಾದಲ್ಲಿ 10 ಪೈಸೆ ಮತ್ತು ಮುಂಬೈನಲ್ಲಿ 12 ಪೈಸೆಯಷ್ಟು ದರ ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com