ಪಿಒಕೆಯಲ್ಲಿ ಭಾರತೀಯ ಸೇನೆ ಉಗ್ರರ ರಕ್ತದೋಕುಳಿ ಹರಿಸಿದ್ದ ಸರ್ಜಿಕಲ್ ದಾಳಿಯ ವಿಡಿಯೋ ಬಹಿರಂಗ!

2016ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯ ವಿಡಿಯೋ ಬಹಿರಂಗಗೊಂಡಿದೆ...
ಭಾರತೀಯ ಸೇನೆ
ಭಾರತೀಯ ಸೇನೆ
ನವದೆಹಲಿ: 2016ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯ ವಿಡಿಯೋ ಬಹಿರಂಗಗೊಂಡಿದೆ. 
ಭಾರತೀಯ ಯೋಧರು ಪಾಕ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿರುವ ವಿಡಿಯೋ ಇದಾಗಿದೆ. ಕಮಾಂಡೋಗಳ ಹೆಲ್ಮೆಟ್ ಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮರಾ ಹಾಗೂ ಡ್ರೋನ್ ಕ್ಯಾಮರಾಗಳಿಂದ ಸರ್ಜಿಕಲ್ ದಾಳಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. 
ಪ್ಯಾರಾ ಕಮಾಂಡೊ ಪಡೆಯ 4 ಹಾಗೂ 9ನೇ ಬೆಟಾಲಿಯನ್ ಈ ಕಾರ್ಯಾಚರಣೆ ಕೈಗೊಂಡಿತ್ತು. ಗಡಿ ನಿಯಂತ್ರಣ ರೇಖೆಯಿಂದ ಸುಮಾರು 2-3 ಕಿಮೀ ದೂರದಲ್ಲಿನ ಉಗ್ರರ ಶಿಬಿರವನ್ನು ಟಾರ್ಗೆಟ್ ಮಾಡಲಾಗಿತ್ತು. 
ದಾಳಿಯಲ್ಲಿ ಉಗ್ರರ 7 ನೆಲಗಳನ್ನು ದ್ವಂಸ ಮಾಡಿರುವ ದೃಶ್ಯ ಈಗ ಬೆಳಕಿಗೆ ಬಂದಿದೆ. ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ದಾಳಿ ನಡೆಸಲಾಗಿತ್ತು.
ವಿಡಿಯೋ ಕೃಪೆ: ಯೂಟ್ಯೂಬ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com