ಬಿಹಾರ: ನಕಲಿ ಮದ್ಯ ಸಾಗಿಸುತ್ತಿದ್ದ 9 ಮಹಿಳೆಯರು ಸೇರಿ 10 ಮಂದಿ ಬಂಧನ
ಮದ್ಯ ನಿಷೇಧಿತ ಬಿಹಾರದಲ್ಲಿ ನಕಲಿ ಮದ್ಯ ಸಾಗಿಸುತ್ತಿದ್ದ ಒಂಬತ್ತು ಮಹಿಳೆಯರು ಸೇರಿದಂತೆ 10 ಮಂದಿಯನ್ನು....

Published On :
ಮುಂಗೆರ್: ಮದ್ಯ ನಿಷೇಧಿತ ಬಿಹಾರದಲ್ಲಿ ನಕಲಿ ಮದ್ಯ ಸಾಗಿಸುತ್ತಿದ್ದ ಒಂಬತ್ತು ಮಹಿಳೆಯರು ಸೇರಿದಂತೆ 10 ಮಂದಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಬಂಧಿತರಿಂದ 800 ಮದ್ಯದ ಪೌಚ್ ಗಳನ್ನು ಜಪ್ತಿ ಮಾಡಿದ್ದಾರೆ.
ನಕಲಿ ಮದ್ಯ ಸಾಗಿಸುತ್ತಿದ್ದ 10 ಮಂದಿಯನ್ನು ಬರಿಯಾರಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ರಿಶಿಕುಂಡ್ ನಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚು ಪೊಲೀಸ್ ಅಧೀಕ್ಷಕ ಹರಿ ಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಪ್ರತಿ ಮಹಿಳೆ ಬಳಿ 200 ಮಿಲಿ ಲೀಟರ್ ನ 80 ಮದ್ಯದ ಪೌಚ್ ಗಳಿದ್ದವು. ಒಟ್ಟು 800 ನಕಲಿ ಮದ್ಯದ ಪೌಚ್ ಗಳ ಮಾರುಕಟ್ಟೆ ಬೆಲೆ 1.20 ಲಕ್ಷ ರುಪಾಯಿ ಎಂದು ಅವರು ತಿಳಿಸಿದ್ದಾರೆ.
ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಮದ್ಯಪಾನ ಎರಡಕ್ಕೂ ನಿಷೇಧ ಹೇರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


