ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಾ ಸಿಕ್ಕಿಬಿದ್ದ ಪತಿ, ಪತ್ನಿ ಮೇಲೆ ಹಲ್ಲೆ

ಅಂತಾರಾಷ್ಟ್ರೀಯ ಮಹಿಳಾ ದಿನದಂದು ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಪತಿಗೆ ಈ ಅನಿಷ್ಠವನ್ನು ನೋಡುವುದನ್ನು ನಿಲ್ಲಿಸಿ ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹೈದರಾಬಾದ್: ಅಂತಾರಾಷ್ಟ್ರೀಯ ಮಹಿಳಾ ದಿನದಂದು ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಪತಿಗೆ ಈ ಅನಿಷ್ಠವನ್ನು ನೋಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಆತ ಪತ್ನಿ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ದುಂಡಿಗಲ್ ನಲ್ಲಿ ನಡೆದಿದೆ. 
ಪತಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ರೇಷ್ಮಾ ಸುಲ್ತಾನ್ ದೂರಿನನ್ವಯ ಪತಿ ಉಮೆರ್ ಪಾಷಾ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. 
ದುಂಡಿಗಲ್ ನಲ್ಲಿ ಉಮೆರ್ ಪಾಷಾ ಕ್ಯಾಬ್ ಚಲಾಯಿಸುತ್ತಿದ್ದಾರೆ. 2013ರಲ್ಲಿ ಉಮೆರ್ ಪಾಷಾ, ರೇಷ್ಮಾ ಸುಲ್ತಾನರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಬುಧವಾರ ರಾತ್ರಿ ಪತಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಇದನ್ನು ಗಮನಿಸಿದ ರೇಷ್ಮಾ ಇಂತಹ ಅನಿಷ್ಠವನ್ನು ನೋಡುವುದನ್ನು ನಿಲ್ಲಿಸು ಎಂದು ಹೇಳಿ ಮೊಬೈಲ್ ಅನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಆತ ಕೋಪಕೊಂಡು ಹಲ್ಲೆ ನಡೆಸಿದ್ದಾನೆ ಎಂದು ಪಂಜಾಗುಟ್ಟಾ ಇನ್ ಪೆಕ್ಟರ್ ಎ ರವೀಂದ್ರ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com